ಸಂಸ್ಕೃತ ಎಲ್ಲ ಭಾಷೆಗಳ ಜನನಿ: ಡಾ.ಯತೀಶ್ ಪೊದುವಾಳ್ ಅನಿಸಿಕೆ

sanskrit
ಸಂಸ್ಕೃತೋತ್ಸವದಲ್ಲಿ ಸಂಸ್ಕೃತ ವಿದ್ವಾಂಸರು ಹಾಗೂ ಜೋತಿಷ್ಯ ಡಾ.ಯತೀಶ್ ಪೊದುವಾಳ್ ಮಾತನಾಡಿದರು. ಶಾಲಾ ಶೈಕ್ಷಣಿಕ ಸಂಯೋಜಕಿ ಶಿಕ್ಷಕಿ ಸುಮಾ ಶ್ರೀನಾತ್ ಮತ್ತಿತರರಿದ್ದರು.
Published on

ಬೆಳ್ತಂಗಡಿ: ಸಂಸ್ಕೃತ ಭಾಷೆ ಎಲ್ಲ ಭಾಷೆಗಳ ಜನನಿ. ಭಾರತದ ಪ್ರತಿಷ್ಠೆ ಎರಡು, ಮೊದಲನೆಯದು ಸಂಸ್ಕೃತಿ, ಎರಡನೆಯದು ಸಂಸ್ಕೃತ ಎಂದು ಸಂಸ್ಕೃತ ವಿದ್ವಾಂಸ ಜೋತಿಷಿ ಡಾ.ಯತೀಶ್ ಪೊದುವಾಳ್ ಹೇಳಿದರು.

ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆ(ಸಿ.ಬಿ.ಎಸ್.ಇ)ಯಲ್ಲಿ ’ಆತ್ಮಾನಂ ಸಂಸ್ಕೃತಂ ಮನ್ಯೆ’ ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಲಾಗಿದ್ದ ’ಸಂಸ್ಕೃತೋತ್ಸವ’ ಉದ್ಘಾಟಿಸಿ ಮಾತನಾಡಿದರು.

ಸಂಸ್ಕೃತ ಜಯ ಘೋಷಗಳೊಂದಿಗೆ ಮೆರವಣಿಗೆ, ಸಂಸ್ಕೃತ ವಸ್ತು ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಶಾಲಾ ಶೈಕ್ಷಣಿಕ ಸಂಯೋಜಕಿ ಶಿಕ್ಷಕಿ ಸುಮಾ ಶ್ರೀನಾತ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿಯರಾದ ಇನಿಕ ಮತ್ತು ಹರ್ಷಿಣಿ ಕಾರ್ಯಕ್ರಮ ನಿರೂಪಿಸಿ, ಆಶುತೋಷ್ ಹಾಗೂ ದೀಪ್ತಿ ಜೈನ್ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕಿ ಶಿಕ್ಷಕಿ ಸುಜನ ವಲ್ತಾಜೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net