

ಉಡುಪಿ: ಸಂಸ್ಕೃತವನ್ನು ಭಾರತದಲ್ಲಿ ಎಲ್ಲರೂ ಮಾತಾನಾಡುತ್ತಿದ್ದ ಕಾಲದಲ್ಲಿ ಭಾರತ ವಿಶ್ವ ಗುರುವಾಗಿತ್ತು. ಪುನ: ನಾವು ಅಂತಹ ವೈಭವಕ್ಕೆ ಸಂಸ್ಕೃತದ ಮೂಲಕ ದೇಶವನ್ನು ಒಯ್ಯಬೇಕು ಎಂದು ಸಂಸತ ಭಾರತೀಯ ಉಡುಪಿ ಜಿಲ್ಲಾ ಅಧ್ಯಕ್ಷ ಶ್ರೀಧರಾಚಾರ್ಯ ಹೇಳಿದರು,.
ಸೋಮವಾರ ತೆಂಕಪೇಟೆಯ ಸಂಸ್ಕೃತ ಭಾರತೀ ಕಾರ್ಯಾಯಲಯದಲ್ಲಿ ಸಂಸತ ಭಾರತೀ ಉಡುಪಿ ಆಯೋಜಿಸಿದ್ದ ಐದು ದಿನಗಳ ಸಂಸತೋತ್ಸವ- ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಅನಂತ ವೈದಿಕ ಕೇಂದ್ರ ನಿರ್ದೇಶಕ ಚೇಂಪಿ ರಾಮಚಂದ್ರ ಅನಂತ ಭಟ್, ಸಂಸತಿಯ ರಕ್ಷಣೆಗೆ ಸಂಸತ ಅಗತ್ಯ. ಮಕ್ಕಳಿಗೆ ಮನೆಯಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸಂಸ್ಕಾರವನ್ನು ಕಲಿಸಬೇಕು. ಮಕ್ಕಳು ಬೆಳೆದಂತೆ ಸಂಸತವನ್ನೂ ಕಲಿಯಬೇಕೆಂದು ಹೇಳಿದರು.
ಸಂಸ್ಕೃತ ಭಾರತೀಯ ಸರಳಾ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಹಾಗೂ ರಸ ಪ್ರಶ್ನೆ ಸ್ಪರ್ಧಾ ವಿಜೇತ ತಂಡಗಳಿಗೆ ಬಹುಮಾನ ನೀಡಲಾಯಿತು.
ಸಂಸತ ಭಾರತೀಯ ಉಡುಪಿ ಜಿಲ್ಲಾ ಸಾಹಿತ್ಯ ಪ್ರಮುಖ್ ಶಕುಂತಲಾ ಭಗಿನಿ ನಿರೂಪಿಸಿದರು, ಅಕ್ಷಯಾ ಹಾಗೂ ಅಮೃತಾಶ್ರೀ ಪ್ರಾರ್ಥನೆ ಹಾಡಿದರು. ಸಂಸ್ಕೃತ ಭಾರತೀಯ ಉಡುಪಿ ಜಿಲ್ಲಾ ಉಪಾಧ್ಯಕ್ಷೆ ಸುಧಾ ಭಗಿನಿ ಸ್ವಾಗತಿಸಿದರು. ಸಂಸ್ಕೃತ ಭಾರತೀಯ ಮಂಗಳೂರು ವಿಭಾಗ ಸಂಯೋಜಕ ನಟೇಶ್ ವಂದಿಸಿದರು.