ಸಂಸ್ಕಾರಯುತ ಶಿಣದಿಂದ ಜೀವನ ಸಾರ್ಥಕ

25ITAGI1
Published on

ಇಟಗಿ: ಆತ್ಮವಿಶ್ವಾಸ, ದೃಢನಿರ್ಧಾರ ಮತ್ತು ನಿರಂತರ ಪ್ರಯತ್ನದಿಂದ ಉನ್ನತ ಗುರಿ ಸಾಧಿಸಲು ಸಾಧ್ಯವಿದೆ ಎಂದು ಸಾಹಿತಿ ಮೃತ್ಯುಂಜಯಸ್ವಾಮಿ ಹಿರೇಮಠ ಹೇಳಿದರು.

ಸಮೀಪದ ಗಂದಿಗವಾಡ ಗ್ರಾಮದ ಪರಂಜ್ಯೋತಿ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹಸಮ್ಮೇಳನ ಹಾಗೂ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಆಧುನಿಕತೆಯಲ್ಲೂ ನಮ್ಮ ಸಂಸತಿ ಸಂಪ್ರದಾಯ ಮರೆಯದೆ ಉತ್ತಮ ಸಂಸ್ಕಾರಯುತ ಶಿಣ ಪಡೆದು ಜೀವನದ ಸಾರ್ಥಕ ಕಂಡುಕೊಳ್ಳಬೇಕು ಎಂದರು.

ಸಂಸ್ಥೆ ಅಧ್ಯಕ್ಷ ಉಮೇಶ ಮೂಲಿಮನಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಗುಣಾತ್ಮಕ ಮತ್ತು ಕೌಶಲಾಧಾರಿತ ಶಿಣ ನೀಡಲು ಸಂಸ್ಥೆ ಹಲವು ರಚನಾತ್ಮಕ ಕಾರ್ಯಕ್ರಮ ಕೈಗೊಂಡಿದೆ ಎಂದರು.

ಆದರ್ಶ ವಿದ್ಯಾರ್ಥಿಗಳಾದ ಪ್ರಶಾಂತ ಬಡಿಗೇರ, ಸಮೃದ್ಧಿ ಜೈನ, ಲಕ್ಷಿ$್ಮ ಅಕ್ಕಿ ಹಾಗೂ ವಿವಿಧ ೇತ್ರಗಳ ಸಾಧಕರ ಸನ್ಮಾನಿಸಲಾಯಿತು. ನಿರ್ದೇಶಕ ಚನ್ನಬಸಯ್ಯ ಹಿರೇಮಠ, ಚಿದಾನಂದ ಶೆಟ್ಟೆನವರ, ಭಾರತಿ ಮೂಲಿಮನಿ, ಪ್ರಾಚಾರ್ಯ ಎನ್​.ಬಿ. ಬೈಲೂರ, ಮುಖ್ಯಶಿಕ್ಷಕ ಎಸ್​.ಎಂ. ನಾಯ್ಕ, ವಿ.ಆರ್​. ಕುಲಕರ್ಣಿ, ವಿ.ಎಸ್​. ಇಟಗಿ, ಎ.ಕೆ.ನಾವಲಗಟ್ಟಿ, ವಿ.ಎಂ. ಗಿರಿಯಾಲ, ಆರ್​.ಬಿ. ಸುಜನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net