

ಸುಬ್ರಹ್ಮಣ್ಯ: ಮನೆಯಲ್ಲಿ ಭಜನೆ ನಡೆದಾಗ ದೇವರಲ್ಲಿ ಭಕ್ತಿ ಹಾಗೂ ಗುರು ಹಿರಿಯರಲ್ಲಿ ಗೌರವ ಭಾವ ತುಂಬುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾಧಿಕಾರಿ ಮಾಧವ ಗೌಡ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು, ಶ್ರೀ ಮಂಜುನಾಥ ಭಜನಾ ಪರಿಷತ್ ಸುಳ್ಯ ತಾಲೂಕು, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಬ್ರಹ್ಮಣ್ಯ ವಲಯ ಹಾಗೂ ಶ್ರೀ ಹರಿಹರೇಶ್ವರ ದೇವಸ್ಥಾನ ಹರಿಹರ ಪಳ್ಳತ್ತಡ್ಕ ಆಶ್ರಯದಲ್ಲಿ ಭಜನಾ ತರಬೇತಿ ಮತ್ತು ಸಂಸ್ಕಾರ ತರಬೇತಿ ಶಿಬಿರದ ಮಂಗಳೋತ್ಸವದಲ್ಲಿ ಮಾತನಾಡಿದರು.
ಆರಂಭದಲ್ಲಿ ಹರಿಹರ ಪಳ್ಳತ್ತಡ್ಕ ಪೇಟೆಯಿಂದ ಕುಣಿತ ಭಜನೆ ಮೆರವಣಿಗೆ ನಡೆಯಿತು. ಸುಳ್ಯ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷ ಯತೀಶ್ ರೈ ದುಗಲಡ್ಕ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಹರಿಹರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು, ಮಂಜುನಾಥೇಶ್ವರ ಭಜನಾ ಪರಿಷತ್ ಕಾರ್ಯದರ್ಶಿ ಸತೀಶ್ ಟಿ.ಎನ್, ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕ ಕೃಷ್ಣಪ್ಪ ಎಂ, ಭಜನಾ ತರಬೇತುದಾರ ಕಲಾವಿದ ರಮೇಶ್ ಮೆಟ್ಟಿನಡ್ಕ, ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ ವಲಯಾಧ್ಯಕ್ಷ ತೀರ್ಥರಾಮ ದೋಣಿಪಳ್ಳ, ಹರಿಹರ ಪಳ್ಳತ್ತಡ್ಕ ಒಕ್ಕೂಟ ಅಧ್ಯಕ್ಷ ಹರ್ಷ ಗೌಡ ಪಾಲ್ತಾಡು, ಕೊಲ್ಲಮೊಗ್ರು ಬಿ ಒಕ್ಕೂಟ ಅಧ್ಯಕ್ಷ ಹೇಮಂತ್, ಬಾಳುಗೋಡು ಒಕ್ಕೂಟ ಅಧ್ಯಕ್ಷ ನಾಗೇಶ್, ಕಲ್ಮಕಾರು ಒಕ್ಕೂಟದ ಅಧ್ಯಕ್ಷ ಶೇಷಪ್ಪ ಕೊಪ್ಪಡ್ಕ, ಕಲ್ಮಕಾರು ಬಿ ಒಕ್ಕೂಟ ಅಧ್ಯಕ್ಷ ರಾಮಣ್ಣ ಗೌಡ, ಐನೆಕಿದು ಒಕ್ಕೂಟದ ಅಧ್ಯಕ್ಷೆ ಮೀನಾಕ್ಷಿ ಕಲ್ಲೇರಿ, ಕುಲ್ಕುಂದ ಒಕ್ಕೂಟದ ಅಧ್ಯಕ್ಷ ಹರಿಪ್ರಸಾದ್ ಉಪಸ್ಥಿತರಿದ್ದರು.
ಭಜನಾ ತರಬೇತಿ ನೀಡಿದವರನ್ನು ಗೌರವಿಸಲಾಯಿತು. ಸೇವಾ ಪ್ರತಿನಿಧಿ ನಾಗವೇಣಿ ಸ್ವಾಗತಿಸಿದರು. ವಲಯ ಭಜನಾ ಪರಿಷತ್ ವಲಯಾಧ್ಯಕ್ಷೆ ಶ್ರೀದೇವಿ ವಂದಿಸಿದರು. ವಲಯ ಮೇಲ್ವಿಚಾರಕ ಕೃಷ್ಣಪ್ಪ ಎಂ. ನಿರೂಪಿಸಿದರು. 84 ಮಕ್ಕಳು ತರಬೇತಿಯಲ್ಲಿ ಭಾಗವಹಿಸಿದ್ದರು.