ಮೌಲ್ಯಾದಾರಿತ ಶಿಕ್ಷಣದಿಂದ ಸಂಸ್ಕಾರ ಸಾಧ್ಯ

mng_22 nov suprabha
ಲೂರ್ಡ್ಸ್ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ತ್ರೀಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಸುಪ್ರಭಾ ಎಂ ಅವರನ್ನು ಗೌರವಿಸಲಾಯಿತು.
Published on

ಮಂಗಳೂರು: ಲೂರ್ಡ್ಸ್ ಶಿಕ್ಷಣ ಸಂಸ್ಥೆಯು ಮಕ್ಕಳಲ್ಲಿ ಮೌಲ್ಯಾದಾರಿತ ಶಿಕ್ಷಣವನ್ನು ರೂಪಿಸಿ, ಅಗತ್ಯಕ್ಕೆ ತಕ್ಕಂತೆ ಸಂಸ್ಕಾರಗಳೊಂದಿಗೆ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುತ್ತಾ ಸಾಗುತ್ತಿದೆ. ಮೌಲ್ಯಾದಾರಿತ ಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಸಾಧ್ಯ ಎಂದು ತ್ರೀಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಸುಪ್ರಭಾ ಎಂ ಹೇಳಿದರು.

ಮಂಗಳೂರು ನಗರದ ಲೂರ್ಡ್ಸ್ ಶಿಕ್ಷಣ ಸಂಸ್ಥೆಯ ಅಸಹಯೋಗದಲ್ಲಿ ಶುಕ್ರವಾರ ನಡೆದ ಪ್ರಾಥಮಿಕ ಶಾಲಾ ವಿಭಾಗದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಲ್ಲಿ ಮೌಲ್ಯಾದಾರಿತ ಶಿಕ್ಷಣ, ಸಂಸ್ಕಾರ ಬೆಳೆದರೆ ಜವಾಬ್ದಾರಿಯುತ ನಾಗರಿಕನಾಗಲು, ಉತ್ತಮ ರಾಷ್ಟ್ರವನ್ನು ರೂಪಿಸಲು ಪ್ರೇರಣೆ ನೀಡುತ್ತದೆ. ಪೋಷಕರು ತಮ್ಮ ಮಕ್ಕಳ ಕಲಿಕೆಗೆ ಉತ್ತೇಜನ ನೀಡುವುದರ ಜೊತೆಗೆ ಅವರ ಚಟುವಟಿಕೆಗಳತ್ತ ಗಮನ ಹರಿಸಿ. ಅವರಿಗಾಗಿ ನಿರ್ದಿಷ್ಟ ಸಮಯ ನಿತ್ಯವೂ ಮೀಸಲಿಟ್ಟಾಗ ಮಕ್ಕಳ ಬೆಳವಣಿಗೆಗೆ ಪುರಕವಾಗುತ್ತದೆ ಎಂದರು.

ಶಾಲೆಯ ಸಂಚಾಲಕ ಡಾ. ಜಾನ್ ಬ್ಯಾಪ್ಟಿಸ್ಟ್ ಸಲ್ಡಾನಾ ಮಾತನಾಡಿ, ನಿಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ನೀಡಿ ಬೆಳೆಸುವುದು ಇಂದಿನ ಅಗತ್ಯತೆಯಲ್ಲೊಂದು. ಮಕ್ಕಳ ಮನಸು ಮುಗ್ದವಾಗಿದ್ದು ಅದಕ್ಕೆ ನೀಡಿದ ರೂಪವನ್ನು ಆ ಮನಸ್ಸು ಪಡೆಯುತ್ತದೆ. ನಮ್ಮ ವಿದ್ಯಾಲಯವು ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಾ ಬಂದಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಸದಾ ಮುಂಚೂಣಿಯಲಿರುತ್ತದೆ ಎಂದರು.

ಪ್ರಾಂಶುಪಾಲ ಜಾನ್ಸನ್ ಎಲ್ ಸಿಕ್ವೇರಾ, ಬಿಜೈ ಪ್ಯಾರಿಸ್ ಪ್ಯಾಸ್ಟರಲ್ ಪರಿಷದ್‌ನ ಉಪಾಧ್ಯಕ್ಷ ಅಶೋಕ್ ಪಿಂಟೋ, ಕಾರ್ಯದರ್ಶಿ ಅವಿತಾ ಸಿಂಥಿಯಾ ಪಿಂಟೋ, ರಕ್ಷಕ- ಶಿಕ್ಷಕ ಸಂಘದ ಕಾರ್ಯದರ್ಶಿ ಶುಭಾ ಜೋಶ್ನಾ, ವಿದ್ಯಾರ್ಥಿ ಉಪನಾಯಕ ಅಂಕಿತ್ ಡಿಸೋಜ, ಉಪನಾಯಕಿ ರಿಧಿ ಚೌಟ ಉಪಸ್ಥಿತರಿದ್ದರು.

ಉಪಪ್ರಾಂಶುಪಾಲರಾದ ಬೆಲಿಟಾ ಮಸ್ಕರೇನ್ಹಸ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಇಯಾನ್ ಕೀತ್ ಲೋಬೋ, ಶ್ರಾವ್ಯ ವಿಷ್ಣುದಾಸ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಜ್ಯುಯಾನ್ ಅನಯ ಕುಂದರ್, ಅಥರ್ವ್ ಅಗರ್‌ವಾಲ್, ಹಿಮಾನಿ ಪಿ ಕುಂಬ್ಳೆ, ಸಹನಾದಾಸ್, ಪಾರ‌್ವಿ ಪ್ರಕಾಶ್, ಆರ್ಯಾ ಬೋಳಾರ್, ಪ್ರದ್ಯುಮ್ನ ಶೇರ್‌ಖಾನೆ, ಹೃಷಿಕೇಶ್ ಎಚ್ ಎಸ್ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಶಾಂತಿ ಮಿನೇಜಸ್ ಕಾರ್ಯಕ್ರಮ ಸಂಯೋಜಿಸಿ, ನಿಶ್ಮಿತಾ ಜ್ಯುವೆಲ್ ಪಿಂಟೋ, ಕೊಸೆಸ್ ಅಪೋಲಿನ್ ಲೋಬೊ ಸಹಕರಿಸಿದರು. ಉಪಪ್ರಾಂಶುಪಾಲೆ ಅನಿತಾ ಥೋಮಸ್ ವಂದಿಸಿದರು.

-----------------

ಆಧುನಿಕ ತಂತ್ರಜ್ಞಾನದೊಂದಿಗೆ ವಿವಿಧ ಕೌಶಲ್ಯಾಧಾರಿತ ತರಬೇತಿಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ವೃಂದಕ್ಕೆ ನೀಡುತ್ತಾ ಬೆಳೆಸುವುದರಿಂದ ಶಿಕ್ಷಣ ಸಂಸ್ಥೆಯ ಜತೆ ಮಕ್ಕಳ ಅಭಿವೃದ್ದಿಯೂ ಸಾಧ್ಯ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ, ಆಧುನಿಕ ತಂತ್ರಜ್ಞಾನ, ಸುರಕ್ಷತೆ, ವಿಮರ್ಶಾತ್ಮಕ ಚಿಂತನೆ ಮತ್ತು ಸೃಜನಶೀಲತೆಗೆ ಅವಕಾಶ ನೀಡುವುದರಿಂದ ಪಠ್ಯದ ಜತೆ ಪಠ್ಯೇತರ ಚಟುವಟಿಕೆಯಲ್ಲೂ ಅಭಿವೃದ್ದಿ ಸಾಧ್ಯ.

-ಡಾ. ಜಾನ್ ಬ್ಯಾಪ್ಟಿಸ್ಟ್ ಸಲ್ಡಾನಾ,

ಲೂರ್ಡ್ಸ್ ಶಿಕ್ಷಣ ಸಂಸ್ಥೆಯ ಸಂಚಾಲಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net