ಸಂಸ್ಕಾರ ಜೀವನದ ಗುರಿಯಾಗಿರಬೇಕು

07 NRGL 2
Published on

ನರೇಗಲ್ಲ: ಸುಂದರ ಭವಿಷ್ಯಕ್ಕಾಗಿ ಓದಬೇಕು, ಮೊಬೈಲ್ ನಿಷೇಧ ಮಾಡಬೇಕು. ಗುರು- ಹಿರಿಯರನ್ನು ಕಂಡರೆ ಬಾಗಿ ನಮಸ್ಕರಿಸುವ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದು ಡಾ. ಕೃಷ್ಣ ಜಿ. ಕಾಳೆ ಸಲಹೆ ನೀಡಿದರು.

ಪಟ್ಟಣದ ಹಿರೇಮಠದ ಸಭಾಭವನದಲ್ಲಿ ಬೀಚಿ ಬಳಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಹಾಗೂ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ದೊಡ್ಡಯ್ಯ ಅರವಟಗಿಮಠ ಮಾತನಾಡಿ, ವಿದ್ಯಾರ್ಥಿಗಳು ಗುರಿ ಸಾಧಿಸುವತ್ತ ಪ್ರಯತ್ನಪಡಬೇಕು. ನೀವು ಮನಸು ಮಾಡಿದರೆ ಏನೆಲ್ಲವನ್ನೂ ಸಾಧಿಸಲು ಸಾಧ್ಯವಿದೆ. ಉತ್ತಮ ಅಭ್ಯಾಸ ಮಾಡಿ ಉನ್ನತ ಸ್ಥಾನ ಗಳಿಸಿ ಎಂದು ಹಾರೈಸಿ ದರು. ಡಾ. ಸಪ್ನಾ ಕಾಳೆ, ಬಳಗದ ಅಧ್ಯಕ್ಷ ಕೆ. ಎಸ್. ಕಳಕಣ್ಣವರ ಮಾತನಾಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ. 90 ಮತ್ತು ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈಶ್ವರ ಬೆಟಗೇರಿ, ಅರುಣ ಕುಲಕರ್ಣಿ, ಸುರೇಶ ಹಳ್ಳಿಕೇರಿ ಸೀಮಾ ಕೊಂಡಿ, ಅನುಶ್ರೀ ಕಳಕಣ್ಣವರ, ಗ್ಯಾನ ಕಾಳೆ, ಕಾವ್ಯಾ ಕುಷ್ಟಗಿ, ಸೀಮಾ ಕೊಂಡಿ, ಚನ್ನಬಸಪ್ಪ ಕುಷ್ಟಗಿ ಮತ್ತು ಸಂತೋಷ ಕಿರಟಗೇರಿ ಇತರರಿದ್ದರು. ಮುಖ್ಯ ಶಿಕ್ಷಕ ಬಿ.ಬಿ. ಕುರಿ ನಿರೂಪಿಸಿದರು. ಶಿಕ್ಷಕ ಬಿ.ಟಿ. ತಾಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net