ಗೆಲುವು ಮತ್ತಷ್ಟು ಜವಾಬ್ದಾರಿ ಹೆಚ್ಚಿಸುತ್ತದೆ

sanskar school
Published on

ಹುಬ್ಬಳ್ಳಿ: ಗೆಲುವು ಒಂದು ದಿನ ಸಂತೋಷವಲ್ಲ. ಅದು ಮತ್ತಷ್ಟು ಜವಾಬ್ದಾರಿಯನ್ನು ಹುಟ್ಟು ಹಾಕುತ್ತದೆ ಎಂದು ನೈಋತ್ಯ ರೈಲ್ವೆಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಹರೀತಾ ಎಸ್. ಹೇಳಿದರು.

ಹುಬ್ಬಳ್ಳಿ ಕೇಶ್ವಾಪುರದ ಸಂಸ್ಕಾರ ಆಂಗ್ಲ ಮಾಧ್ಯಮ ಸಿಬಿಎಸ್​ಇ ಶಾಲೆಯ ವಿದ್ಯಾರ್ಥಿ ಸಂಸತ್ತಿನ ಪದಾಧಿಕಾರಿಗಳ ಪ್ರದಗ್ರಹಣ ಸಮಾರಂಭ ಉದ್ಘಾಟಿಸಿದ ಮಾತನಾಡಿದ ಅವರು, ಭಾರತದಲ್ಲಿ ಚುನಾವಣೆ ಎಂಬುದು ದೊಡ್ಡ ಹಬ್ಬ ಇದ್ದಂತೆ. ಪ್ರಜೆಗಳು ಜಾತಿ, ಧರ್ಮ, ಭಾಷೆ ಮೀರಿ ತಮ್ಮ ಹಕ್ಕನ್ನು ಚಲಾಯಿಸಲು ಒಂದಾಗುತ್ತಾರೆ. ವಿದ್ಯಾರ್ಥಿಗಳು ಮುಂದಿನ ರಾಜಕಾರಣಿಗಳಾಗಬಹುದು ಎಂದರು.

ಲೆಕ್ಕ ಪರಿಶೋಧಕಿ ನಿಶಾ ಶೆಟ್ಟರ್, ಶಾಲೆಯ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಮಾತನಾಡಿದರು. ಶಾಲಾ ಸಂಸತ್ತಿನ ಪ್ರಧಾನಿಯಾಗಿ ಫ್ಯಾಬಿನ್ ಶಾಹುಲ್, ಉಪ ಪ್ರಧಾನಿಯಾಗಿ ಅನಘಾ ನಾಡಿಗೇರ , ಸಭಾಪತಿಯಾಗಿ ಚಾರ್ವಿ ಜೈನ್ ಹಾಗೂ ಪೋಷಕ ಪಕ್ಷದ ನಾಯಕನಾಗಿ ವಿಹಾನ್ ಜೈನ್ ಆಯ್ಕೆಯಾದರು. ಚುನಾವಣಾ ಅಧಿಕಾರಿ ಸುರೇಖಾ ಪಾರ್ಲೆಕರ ಪ್ರಮಾಣ ವಚನ ಬೋಧಿಸಿದರು. ಶಾಲೆಯ ಅಧ್ಯಕ್ಷ ಮಹಾವೀರ ಕುಂದೂರ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯದರ್ಶಿ ಸುಧೀರ ವೋರಾ, ಖಜಾಂಚಿ ಉಜ್ವಲ್ ಸಿಂಘಿ, ನಿರ್ದೇಶಕಿ ಸಪ್ನಾ ವೋರಾ , ಪ್ರಾಚಾರ್ಯ ನೈನಾ ಪಿ.ಸಿ., ಸಿಎಒ ವಿನೋದ್ ಎಸ್. ಇದ್ದರು. ಕುಶಾಲ್ ಶಿರೇಕರ್ ಸ್ವಾಗತಿಸಿದನು. ವಿದ್ಯಾರ್ಥಿಗಳಾದ ದಿಶಾ ಬಾಫಣಾ ಮತ್ತು ನೇಹಾ ಸೋಳಂಕಿ ನಿರೂಪಿಸಿದರು. ಪೂರ್ವಿ ಕರವೀರಶೆಟ್ಟರ ವಂದಿಸಿದಳು. ಶಿಕ್ಷಕರಾದ ಮರ್ಸಿ ಗುಂಟಿ, ರಶ್ಮಿ ಬೋಗಾರ್, ಅನಿತಾ ಪವಾರ್, ನಿಲೋಫರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net