ಸಂಸ್ಕಾರ ಮರೆಯುತ್ತಿರುವ ಯುವಜನತೆ

6Muragod1
Published on

ಮುರಗೋಡ: ಯುವಕರು ತಪ್ಪು ದಾರಿಯಲ್ಲಿ ಮುನ್ನಡೆದು ಸಂಸ್ಕಾರ ಮರೆಯುತ್ತ್ತಿರುವುದು ಬೇಸರದ ಎಂದು ಮುನವಳ್ಳಿ ಸೋಮಶೇಖರ ಮಠದ ಮುರುರಾಜೇಂದ್ರ ಸ್ವಾಮೀಜಿ ಹೇಳಿದರು.

ಇಲ್ಲಿನ ಮಹಾಂತ ದುರದುಂಡೇಶ್ವರ ಮಠದಿಂದ ಪಂಚವಟಿ ಕಲ್ಯಾಣ ಕೇಂದ್ರದವರೆಗೆ ಹಮ್ಮಿಕೊಂಡಿದ್ದ ಸದ್ಭಾವನಾ ಪಾದಯಾತ್ರೆಗೆ ಈಚೆಗೆ ಚಾಲನೆ ನೀಡಿ ಮಾತನಾಡಿದರು.

ಬೈಲಹೊಂಗಲ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ, ಶ್ರೀ ಮಠದ ಪೀಠಾಧಿಕಾರಿ ನೀಲಕಂಠ ಸ್ವಾಮೀಜಿ ಪಾದಯಾತ್ರೆಯಲ್ಲಿ ಭಕ್ತರಿಗೆ ಆಶೀರ್ವಸಿದರು. ಶಿವನಗೌಡ ಪಾಟೀಲ, ದುಂಡಪ್ಪ ಕಾರಿ, ಮಹಾಂತೇಶ ದಾಡಿಗುಂಡಿ, ಸುರೇಶ ಮ್ಯಾಕಲ, ಮಹಾಂತೇಶ ಬೆಟ್ಟದ, ಪರಮೇಶ ತಟ್ಟಿಮನಿ. ಪ್ರಕಾಶ ಕಾರಗಿ, ಸಂತೋಷ ಹಿರೇಮಠ, ಪಾರ್ವತಿ ಹುಲ್ಲೇಪ್ಪನವರಮಠ, ಜಯಶ್ರೀ ಮಲ್ಲಯ್ಯನವರಮಠ, ಶಿವಲೀಲಾ ಯರಗಟ್ಟಿಮಠ, ಲಕ್ಷಿ$್ಮ ಗಡಸೆ, ಎಸ್​.ವಿ.ಕಂಠಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net