

ಚಿತ್ರದುರ್ಗ: ಸಂಸ್ಕಾರ ಭಾರತೀ ಚಿತ್ರದುರ್ಗ ಶಾಖೆ ದಶಮಾನೋತ್ಸವದ ಅಂಗವಾಗಿ ಆ.26ರಿಂದ 2 ದಿನಗಳ ಕಾಲ ನಗರದಲ್ಲಿ ರಾಜ್ಯಮಟ್ಟದ ಪ್ರಾಂತ ಪ್ರಬಂಧಕಾರಿಣಿ ಬೈಠಕ್ ಮತ್ತು ಪ್ರಾಂತ ಸರ್ವ ಸಾಧಾರಣ ಸಭೆ ನಡೆಯಲಿದೆ.
26ರ ಶನಿವಾರ ಜೋಗಿಮಟ್ಟಿ ರಸ್ತೆ ಶ್ರೀ ಸದ್ಗುರು ಕಬೀರಾ ಸೇವಾಶ್ರಮದಲ್ಲಿ ಮಧ್ಯಾಹ್ನ 2.30ರಿಂದ ಸಂಜೆ 6.30ರವರೆಗೆ ಪ್ರಾಂತ ಪ್ರಬಂಧಕಾರಿಣಿ ಸಭೆ ನಡೆಯಲಿದ್ದು, ಸಂಜೆ 6ಕ್ಕೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸಂಸ್ಕಾರ ಭಾರತೀಯ ಪ್ರಾಂತದ ಅಧ್ಯಕ್ಷ, ನಟ ಸುಚೇಂದ್ರ ಪ್ರಸಾದ್ ಹಾಗೂ ರಾಜ್ಯ ಪದಾಧಿಕಾರಿಗಳ ಪರಿಚಯ ಕಾರ‌್ಯಕ್ರಮ ಏರ್ಪಡಿಸಲಾಗಿದೆ.
ಈ ಸಂದರ್ಭದಲ್ಲಿ ಅಷ್ಠವಿಧಾ ಕಲಾ ಸಂಭ್ರಮ ಮತ್ತು ಕಲಾ ಪ್ರಸ್ತುತ್ತಿಗಳು ಪ್ರದರ್ಶನವಾಗಲಿದೆ. 27ರ ಬೆಳಗ್ಗೆ 10ರಿಂದ 6.30ರವರೆಗೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಪ್ರಾಂತ ಸರ್ವ ಸಾಧಾರಣಾ ಸಭೆ ನಡೆಯಲಿದೆ. ಅಖಿಲ ಭಾರತೀಯ ಸಂಘಟನಾ ಕಾರ‌್ಯದರ್ಶಿ ಅಭಿಜಿತ್‌ಗೋಖಲೆ ಭಾಗವಹಿಸಲಿದ್ದಾ ರೆ ಎಂದು ಸಂಸ್ಥೆ ಜಿಲ್ಲಾಧ್ಯಕ್ಷೆ ಸುಜಾತಾ ಲಿಂಗಾರೆಡ್ಡಿ ಮತ್ತು ಕಾರ‌್ಯದರ್ಶಿ ಉಮೇಶ್ ತುಪ್ಪದ್ ತಿಳಿಸಿದ್ದಾರೆ.