

ಕಲಬುರಗಿ : ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಸನ್ನತಿಯಲ್ಲಿ ನೆಲೆ ನಿಂತಿರುವ ಶ್ರೀ ಚಂದ್ರಲಾ ಪರಮೇಶ್ವರಿ ಸನ್ನಿಧಿಯಲ್ಲಿ ಏಳುದಿನಗಳ ದೇವಿ ಜಾತ್ರಾ ಉತ್ಸವ ಹುಣ್ಣಿಮೆಯಿಂದ ಶುರುವಾಗಲಿದೆ.
ಪ್ರತಿವರ್ಷದಂತೆ ಈ ವರ್ಷವೂ ಸಹ ದವನದ ಹುಣ್ಣಿಮೆಯಿಂದ ಸಪ್ತಮಿವರೆಗೆ ವೈಭವ ಮೇಳೈಸಲಿದೆ..ಮೊದಲ ದಿನ ಅಂದ್ರೆ ಏಪ್ರಿಲ್ 12 ರಂದು ಧ್ವಜಾರೋಹಣ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುವುದು..ದಿನವೂ ಉಷಾಕಾಲ ಪೂಜೆ ಅಭಿಷೇಕ ಅಲಂಕಾರ ಕುಂಕುಮಾರ್ಚನೆ ಮಹಾಮಂಗಳಾರತಿ ತೀರ್ಥಪ್ರಸಾದ ಜರುಗುವುದು.ಇನ್ನು ಪ್ರತಿದಿನ ರಾತ್ರಿ 7 30 ಕ್ಕೆ ಪಲ್ಲಕ್ಕಿ ಹಾಗು ದೇವಿ ವಾಹನ ಸೇವೆ ನಡೆಯುವುದು. ಏಪ್ರಿಲ್ 16 ರಿಂದ 18 ರವರೆಗೆ ಮೂರು ದಿನಗಳ ಕಾಲ ಜಗದೀಶ್ ಶರ್ಮಾ ರಿಂದ ಪುರಾಣ ಗಾಯತ್ರಿ ಭಟ್ ರವರಿಂದ ಕೀರ್ತನೆ ಸೇವೆ ನಡೆಯುವುದು.
ಅದರಂತೆ 17 ರಂದು ರಾತ್ರಿ 8 ಕ್ಕೆ ದೇವಿ ತೆಪ್ಪೋತ್ಸವ 18 ರಂದು ಸಂಜೆ 6 ಗಂಟೆಗೆ ರಥೋತ್ಸವ ಜರುಗುವುದು..
ಮೂರು ದಿನ ಭಕ್ತಿ ಸಂಗೀತ ದಾಸವಾಣಿ ಭರತ ನಾಟ್ಯ..
ಅಂದಹಾಗೆ ಜಾತ್ರಾ ಉತ್ಸವ ಹಿನ್ನಲೆ ನಾಡಿನ ಪ್ರಖ್ಯಾತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.. ಇದರಲ್ಲಿ ಬೆಂಗಳೂರಿನ ಮುದ್ದು ಮೋಹನ್ ಅರ್ಚನಾ ಕುಲಕರ್ಣಿ ಕಲಬುರಗಿಯ ಶ್ರೀಲಕ್ಷ್ಮಿ ದೇಶಪಾಂಡೆ ರಾಯಚೂರಿನ ವರದೇಂದ್ರ ಸೇರಿದಂತೆ ಭಾಗ್ಯ ಶೃತಿ ಜೋಶಿ ಗುಂಡಾಚಾರ್ ವಿನಾಯಕ ಮತ್ತು ರಾಕೇಶ್ ತಂಡ ಭಕ್ತಿ ಸಂಗೀತ ನಡೆಸಲಿದ್ದಾರೆ.. ಅಲ್ಲದೇ ಅನಂತ ಚಿಂಚನಸೂರ್ ತಂಡದಿಂದ ಭರತನಾಟ್ಯ ಸೇವೆ ನಡೆಯಲಿದೆ..
ಈ ಎಲ್ಲ ಕಾರ್ಯಕಮಕ್ಕೆ ರಾಜ್ಯ ಹೊರ ರಾಜ್ಯದ ಅಪಾರ ಭಕ್ತರು ಉತ್ಸವಕ್ಕೆ ಆಗಮಿಸಿ ತಾಯಿ ಚಂದ್ರಲಾಂಬೆಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು ಅಂತ ಚಂದ್ರಲಾಬಾ ಸೇವಾ ಸಂಘ ಕೋರಿದೆ ಎಂದು ಗೋಪಾಲ ಕುಲಕರ್ಣಿ ತಿಳಿಸಿದ್ದಾರೆ.