ರಾಮಾಯಣ ಶ್ರವಣದಿಂದ ಸನ್ಮಾರ್ಗ ನಾಂದಿ

WhatsApp Image 2024-07-13 at 9.51.09 PM
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರೀಮದ್​ ರಾಮಾಯಣ ಶ್ರವಣದಿಂದ ಸನ್ಮಾರ್ಗ ನಾಂದಿಯಾಗುತ್ತದೆ. ಶ್ರೀರಾಮಚಂದ್ರ ದೇವರು ಧರ್ಮದ ಸಾಕಾರ ಮೂರ್ತಿ. ರಾಮಾಯಣ ಅನೇಕ ದೇವತೆಗಳ, ನದಿಗಳ , ರಾಜರ , ಚರಿತ್ರೆ ತಿಳಿಸುತ್ತದೆ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮತಿರ್ಥ ಶ್ರೀಪಾದರು ಹೇಳಿದರು.
ಸತ್ತೂರಿನ ನಾರಾಯಣ ಪಾರಾಯಣ ಬಳಗದ ವತಿಯಿಂದ ರಾಜಾಜಿನಗರದಲ್ಲಿನ ರಘೋತ್ತಮ ಅವಧಾನಿ ನಿವಾಸದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶ್ರೀಮದ್​ ರಾಮಾಯಣ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಮಚಂದ್ರ ದೇವರು ರಾಜ, ಅಣ್ಣ, ಮಿತ್ರ, ಶತ್ರುವಾಗಿ, ಮಗನಾಗಿ, ಗಂಡನಾಗಿ, ಹೀಗೆ ಅನೇಕ ಸಂಬಂಧಗಳನ್ನು, ಜೀವನದಲ್ಲಿ ಹೇಗೆ ವ್ಯವಹಾರ ಮಾಡಬೇಕು, ಯಾವುದು ಹಿತ ಸೇರಿ ಅನೇಕ ವಿಷಯಗಳನ್ನು ವಾಲ್ಮೀಕಿ ಮಹಷಿರ್ಗಳು ರಾಮಾಯಣ ಮೂಲಕ ಅದ್ಭುತ ಸಂದೇಶ ಕೊಟ್ಟಿದ್ದಾರೆ ಎಂದರು.
ರಾಮದೇವರ ಮಹಿಮೆ, ಕಥಾ ಶ್ರವಣದಿಂದ ಮೋಕ್ಷದ ದಾರಿ ತೋರಿಸುತ್ತದೆ. ಯಾರಿಗೂ ಮೋಸ, ವಂಚನೆ ಮಾಡಬಾರದು. ಸುಳ್ಳು ಹೇಳಬಾರದು. ನಮ್ಮ ಕರ್ತವ್ಯಗಳನ್ನು ಹೇಗೆ ನಿರ್ವಹಿಸಬೇಕು ಎಂದು ತಿಳಿದುಕೊಳ್ಳಲು ರಾಮಾಯಣದ ಶ್ರವಣ ಅವಶ್ಯ. ದೇವರ ಮಹಿಮೆ, ಹಿರಿಯರ ಆದರ್ಶಗಳ ಪಾಲನೆಯಿಂದ ಪುಣ್ಯ ಸಂಪಾದನೆ ಆಗುತ್ತದೆ ಎಂದು ರಾಮಾಯಣ ಸಂದೇಶದ ಅನುಗ್ರಹ ನೀಡಿದರು.
ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಹನುಮಂತ ಪುರಾಣಿಕ, ವಾದಿರಾಜ ಆಚಾರ್​, ಎಲ್​.ವಿ. ಜೋಶಿ, ಸಂಜೀವ ಗೊಳಸಂಗಿ, ವಿಲಾಸ ಸಬನೀಸ, ಆನಂದ ದೇಶಪಾಂಡೆ, ಸಂಜೀವ ಜೋಶಿ, ನಾಗೇಶ ನರಸಾಪುರ, ಎಂ.ಆರ್​. ಕಲಕೋಟಿ, ಅಶೋಕ ಕುಲಕರ್ಣಿ, ಪ್ರಕಾಶ ದೇಸಾಯಿ, ಪ್ರಶಾಂತ ಕುಲಕರ್ಣಿ, ಅಶೋಕ ಕುಲಕರ್ಣಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net