

ಮೈಸೂರು: ನಗರದ ಹೆಸರಾಂತ ಆಭರಣ ತಯಾರಿಕೆ ಹಾಗೂ ಮಾರಾಟಗಾರಾದ ಎ.ಶಂಕರಚೆಟ್ಟಿ ಆ್ಯಂಡ್ ಸನ್ಸ್‌ನ ಶತಮಾನೋತ್ಸವದ ಅಂಗವಾಗಿ ‘ಸನ್ಮಾರ್ಗ’ ಭರತ ನಾಟ್ಯ ಪ್ರಸ್ತುತ ಪಡಿಸಲಾಯಿತು.
ಲಕ್ಷ್ಮೀಪುರಂನ ನಾದಬ್ರಹ್ಮ ಸಂಗೀತ ಸಭಾ ಸಭಾಂಗಣದಲ್ಲಿ ಭಾನುವಾರ ಕಮಲಮ್ಮ ಗೋಪಾಲಚೆಟ್ಟಿ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ನೃತ್ಯಕಲಾವಿದೆ ಡಾ.ವಸುಂಧರಾ ದೊರೆಸ್ವಾಮಿ ಅವರ ಶಿಷ್ಯರಿಂದ ನೃತ್ಯ ಪ್ರಸ್ತುಪಡಿಸಿದ್ದು, ಸಂಗೀತ ಪ್ರೇಮಿಗಳ ಮನತಣಿಸಿತು.
ವಿದುಷಿ ಡಾ.ಲಕ್ಷ್ಮೀರೇಖಾ ಅರುಣ್, ಡಾ.ವಿಭಾ ಗಿರೀಶ್, ಶ್ರೀಲಕ್ಷ್ಮೀ ತೇಜಸ್, ಸೌಂದರ್ಯ ಅವರು ಮನೋಜ್ಞವಾಗಿ ನೃತ್ಯ ಪ್ರದರ್ಶನದ ಮೂಲಕ ನೋಡುಗರ ಮನಸೂರೆಗೊಂಡರು.
ರಾಮಾಯಣದ ತುಣಕುಗಳನ್ನು ಒಳಗೊಂಡ ಪ್ರಾರ್ಥನೆಯೊಂದಿಗೆ ಆರಂಭಗೊಂಡ ನೃತ್ಯ ಲಹರಿ, ಶ್ರೀವಿಘ್ನ ರಾಜಂ ಭಜೇ, ಕನಕದಾಸರ ರಚನೆಯ ಮೋಹನ ತರಂಗಿಣಿಯ ಧರು ವರ್ಣ, ವಚನ ಭಕ್ತಿ ಚಳವಳಿಯನ್ನು ಆಧರಿಸಿದ ಪ್ರಸ್ತುತಿ, ದಶಾವತಾರ, ಚವಳಿ-ಮಧುರನಾಗರಿಲೋ, ತಲ್ಲಾಣದೊಂದಿಗೆ ವಧುಂದರ ಶೈಲಿಯ ನೃತ್ಯ ಪ್ರಕಾರ ಮುಕ್ತಾಯಗೊಂಡಿತು.
ಎ.ಶಂಕರಶೆಟ್ಟಿ ಆ್ಯಂಡ್ ಸನ್ಸ್‌ನ ಮಾಲೀಕರಾದ ಎ.ಜಿ.ಕೃಷ್ಣಮೂರ್ತಿ, ಆದರ್ಶ ಕೆ.ಮೂರ್ತಿ, ಲಕ್ಷ್ಮೀಮೂರ್ತಿ, ಎ.ಪಲ್ಲವಿ ಆದರ್ಶ, ಎ.ಅಧ್ಯವಿ ಆದರ್ಶ ಇದ್ದರು.