ಇತರರಿಗೂ ಮಾದರಿಯಾದ ಮನೋಜ ಸಾಧನೆ

02 RTL 01
Published on

ವಿಜಯವಾಣಿ ಸುದ್ದಿಜಾಲ ರಟ್ಟಿಹಳ್ಳಿ

ಪಟ್ಟಣದ ನಿವಾಸಿ ಸಾಹಿತಿ ಸುರೇಶ ಮಲ್ಲಾಡದ ಅವರ ಪುತ್ರ ಮನೋಜ ಮಲ್ಲಾಡದ ಇತ್ತೀಚಿಗೆ ಜರುಗಿದ ನೀಟ್​ ಪರೀೆಯಲ್ಲಿ ಉತ್ತಮ ಫಲಿತಾಂಶ ಪಡೆದು ಸರ್ಕಾರಿ ಕೋಟಾದಡಿ ಎಂಬಿಬಿಎಸ್​ ವೈದ್ಯಕಿಯ ಶಿಕ್ಷಣ ಪ್ರವೇಶ ಪಡೆದಿರುವ ಹಿನ್ನೆೆಲೆಯಲ್ಲಿ ತಾಲೂಕು ಕ.ಸಾ.ಪ ಟಕದಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಕ.ಸಾ.ಪ ಟಕದ ತಾಲೂಕು ಅಧ್ಯಕ್ಷ ಎಂ.ಸಿ.ತುಮ್ಮಿನಕಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಯುವ ಪ್ರತಿಭೆ ಮನೋಜ ಉತ್ತಮ ಗುರಿಯೊಂದಿಗೆ ನಿರಂತರ ಶ್ರಮವಹಿಸಿ ಈ ಸಾಧನೆ ಮಾಡಿದ್ದಾನೆ. ಗ್ರಾಮೀಣ ಪ್ರದೇಶದ ವಿದ್ಯಾಥಿರ್ಗಳು ನಿರಂತರ ಶ್ರಮ ಮತ್ತು ಪ್ರಯತ್ನದಿಂದ ಉತ್ತಮ ಫಲಿತಾಂಶ ಪಡೆಯಬಹುದು ಎಂಬುವುದಕ್ಕೆ ಈ ವಿದ್ಯಾಥಿರ್ ಮಾದರಿಯಾಗಿದ್ದಾರೆ ಎಂದರು.

ಹಿರೇಕೆರೂರು ನಗರದಲ್ಲಿ ಸರ್ಕಾರಿ ಮತ್ತು ಖಾಸಗಿ ವೈದ್ಯಕಿಯ ಪ್ರವೇಶ ಪಡೆದ ಒಟ್ಟು 17 ವಿದ್ಯಾಥಿರ್ಳಿಗೆ ಶಾಸಕ ಯು.ಬಿ.ಬಣಕಾರ ಮತ್ತು ಡಾ.ನಿರಂಜನ ಬಣಕಾರ ಸನ್ಮಾನಿಸಿ ವಿದ್ಯಾಥಿರ್ಗಳಿಗೆ ಸಲಹೆ ಸೂಚನೆ ನೀಡಿದರು.

ಕ.ಸಾ.ಪ ನಗರ ಟಕದ ಅಧ್ಯಕ್ಷ ಗಣೇಶ ವೇಣಿರ್ಕರ, ಪ್ರಾಚಾರ್ಯ ರಾವೇಂದ್ರ ಎ.ಜಿ, ಪ್ರಾಚಾರ್ಯ ಕೆ.ಆರ್​.ಕೋಣ್ತಿ, ಬಿ.ಡಿ.ಪಾಟೀಲ, ಹೇಮಣ್ಣ ನಿಂಬೆಗುಂದಿ, ಚಂದ್ರಶೇಕರ ಜಾಡರ, ಎ.ಎಸ್​.ಐ ಅಶೋಕ ಕೊಂಡ್ಲಿ, ಮಲ್ಲಿಕಾರ್ಜುನ ಹೇರಕರ, ಸತೀಶ ಮಡಿವಾಳರ, ಸುರೇಶ ಮಲ್ಲಾಡದ ಮತ್ತು ಗೀತಾ ಸುರೇಶ ಮಲ್ಲಾಡದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net