

ಮಡಿಕೇರಿ:
ಮಡಿಕೇರಿಆಕಾಶವಾಣಿಯಿಂದ ನಿವೃತ್ತಿ ಹೊಂದಿದ ಕೂಪದಿರ ಶಾರದಾ ನಂಜಪ್ಪ ಅವರನ್ನು ಆಕಾಶವಾಣಿಯಲ್ಲಿ ಅವರು ಸಲ್ಲಿಸಿದ ಸೇವೆ ಗುರುತಿಸಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗುರುವಾರ ಸನ್ಮಾನಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಗೌರವ ಕಾರ್ಯದರ್ಶಿ ರೇವತಿ ರಮೇಶ್, ನಿರ್ದೇಶಕರುಗಳಾದ ವಿ.ಟಿ ಮಂಜುನಾಥ್, ಶೋಭಾ ಸುಬ್ಬಯ್ಯ, ಶ್ವೇತಾ ರವೀಂದ್ರ, ಸದಸ್ಯರುಗಳಾದ ಚೊಕ್ಕಾಡಿ ಪ್ರೇಮಾ ರಾಘವಯ್ಯ, ಸುಂದರಿ ಮಾಚಯ್ಯ, ಕಸ್ತೂರಿ ಗೋವಿಂದಮಯ್ಯ ಉಪಸ್ಥಿತರಿದ್ದರು.