ಕಾಲೆಳೆಯುವವರ ನಡುವೆ ಇರಲಿ ಎಚ್ಚರ ; ಬೆಂಗಳೂರು ವಿವಿ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಸಲಹೆ

26TMK_Tigala
Published on

ತುಮಕೂರು : ಹಿಂದುಳಿದ ಸಮುದಾಯದ ಜನರು ಸಿಕ್ಕ ಅವಕಾಶ ಬಳಸಿಕೊಂಡು ಉನ್ನತ ಹುದ್ದೆಗೇರಿದರೂ ಕಾಲೆಳೆಯುವವರು ಇರುತ್ತಾರೆ, ಯುವಜನರು ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ ಎಂದು ಬೆಂಗಳೂರು ವಿವಿ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಅಭಿಪ್ರಾಯಪಟ್ಟರು.

ನಗರದ ಹನುಮಂತಪುರ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ ಭಾನುವಾರ ಅಗ್ನಿವಂಶ ಕ್ಷತ್ರೀಯ ತಿಗಳ ಯೂತ್ ೆರ್ಸ್ ವತಿಯಿಂದ ಆಯೋಜಿಸಿದ್ದ ಶೈಕ್ಷಣಿಕ ಸವಾವೇಶ ಮತ್ತು ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.

ಕೆಲವರು ತಪ್ಪು ತಿಳಿವಳಿಕೆಯಿಂದ ನೀಡಿದ ದೂರಿನಿಂದಾಗಿ ಸರ್ಕಾರಿ ಸೇವೆಯಿಂದ ಅವಾನತುಗೊಂಡು ಮತ್ತೆ ಅದೇ ಹುದ್ದೆಯಲ್ಲಿ ಮುಂದುವರಿದಿದ್ದೇನೆ, ಈ ರೀತಿಯ ಅನುಭವಗಳು ಮತ್ತ್ಯಾರಿಗೂ ಆಗದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದರು.

ಅಗ್ನಿವಂಶ ಕ್ಷತ್ರೀಯ ತಿಗಳ ಸಮುದಾಯದಲ್ಲಿ ಶೈಕ್ಷಣಿಕ ಕ್ಷೇತದಲ್ಲಿ ಗುರುತಿಸಿಕೊಂಡಿರುವವರ ಸಂಖ್ಯೆ ಅತಿ ಕಡಿಮೆ, ಅಲ್ಲಲ್ಲಿ ಒಂದಿಬ್ಬರು ಉನ್ನತ ಹುದ್ದೆಗಳನ್ನು ಪಡೆದಿದ್ದಾರೆ. ಅವರು ಯುವ ಸಮೂಹಕ್ಕೆ ಹೆಚ್ಚಿನ ವಾರ್ಗದರ್ಶನ ವಾಡ ಬೇಕಾಗಿದೆ, ಶಿಕ್ಷಣ ಇಂದು ಅತ್ಯಂತ ಅಗತ್ಯವಾಗಿ ಬೇಕಾಗಿದೆ, ಸತತ ಪರಿಶ್ರಮದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ವಾಡಲು ಸಾಧ್ಯ ಎಂದರು.

ರಾಷ್ಟ್ರಪಶಸ್ತಿ ಪುರಸ್ಕೃತ ಶಿಕ್ಷಕ ಹನುಮದಾಸ್ ವಾತನಾಡಿ, ಜ್ಞಾನ ಎಲ್ಲರಿಗೂ ಮುಖ್ಯವಾಗಿದ್ದು, ಶಾಲೆಗೆ ಸಿಮೀತವಾಗಿಲ್ಲ. ಸಾವಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯಗಳ ಆಸ್ಥಿತ್ವ ಉಳಿಯಬೇಕಾದರೆ ಶಿಕ್ಷಣದಿಂದ ಸಾಧ್ಯ ಹಾಗಾಗಿ, ರಾಜ್ಯ ಅಗ್ನಿವಂಶ ಕ್ಷತ್ರೀಯ ತಿಗಳ ಯೂತ್ ೆರ್ಸ್ ಸಂಸ್ಥೆ, ಸಮುದಾಯದ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಯ ಹಿನ್ನೆಲೆಯಲ್ಲಿ ಸಂಘಟನೆ ಮುಖ್ಯವಾಗಿದೆ ಎಂದರು.

ಪಾಲಿಕೆಯ ವಾಜಿ ಸದಸ್ಯ ಪ್ರೆಸ್ ರಾಜಣ್ಣ, ತಿಗಳ ಯೂತ್ ಫೋರ್ಸ್‌ನ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಾತನಾಡಿದರು. ಪ್ರಾಚಾರ್ಯ ಶ್ರೀಕಂಠಯ್ಯ, ಶಿಕ್ಷಣ ತಜ್ಞ ಡಾ.ಲೋಕೇಶ್ ಮತ್ತಿತರರು ಇದ್ದರು.

ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಎಚ್.ಆರ್.ರೇಣುಕಯ್ಯ, ಎ.ರಾಮುಸ್ವಾಮಿ, ಆನಂತರಾಜು, ಹುಲಿರಾಮಯ್ಯ, ಜಯರಾಮು ಸೇರಿ ಜಿಲ್ಲೆಯ 16 ಜನ ಶಿಕ್ಷಕ ಅಭಿನಂದಿಸಲಾಯಿತು. ವೇದಿಕೆಯಲ್ಲಿ ರಾಜ್ಯ ಅಗ್ನಿವಂಶ ಕ್ಷತ್ರೀಯ ತಿಗಳ ಯೂತ್ ೆರ್ಸ್ ಅಧ್ಯಕ್ಷ ವಾರುತಿ, ಮಂಜುನಾಥ ಸೇರಿ ಎಲ್ಲ ಪದಾಧಿಕಾರಿಗಳು ಇದ್ದರು.

ಗುರುವಂದನೆ ಮಾದರಿ : ಗುರು ಇಲ್ಲದೆ ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಸಾಧ್ಯವಿಲ್ಲ. ಹಾಗಾಗಿ, ತಿಗಳ ಸಮುದಾಯದ ಯೂತ್ ೆರ್ಸ್ ಸಂಸ್ಥೆ ಶೈಕ್ಷಣಿಕ ಸವಾವೇಶದ ಜತೆಗೆ ಗುರುವಂದನೆ ಕಾರ್ಯಕ್ರಮ ಆಯೋಜಿಸಿ, ಉತ್ತಮ ಕೆಲಸ ವಾಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ ತಿಳಿಸಿದರು.

ಸಮುದಾಯದ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಸಮುದಾಯದ ಯುವಕರು ಮತ್ತು ಶಿಕ್ಷಕರ ನಡುವೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಿದೆ. ಇದು ಶಿಕ್ಷಣದಲ್ಲಿ ಬಹಳ ಹಿಂದೆ ಉಳಿದಿರುವ ಈ ಸಮುದಾಯದ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ. ವ್ಯವಸಾಯ,ಹಣ್ಣು,ಹೂವು, ತರಕಾರಿ ಬೆಳೆಯುವ ಶ್ರಮಜೀವಿಗಳಾದ ಇವರಲ್ಲಿಯೂ ಶೈಕ್ಷಣಿಕ ಜಾಗೃತಿ ಮೂಡಿಸಲು ಯುವ ಸಮೂಹ ಮುಂದಾಗಿರುವುದು ಶ್ಲಾನೀಯ ಕೆಲಸ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net