ಮಾಜಿ ಯೋಧನಿಗೆ ಸನ್ಮಾನ

sanmana
Published on

ಮಡಿಕೇರಿ:

ದೊಡ್ಡ ಸಂಖ್ಯೆಯಲ್ಲಿ ಯುವಕರು ಭಾರತೀಯ ಸೇನೆಗೆ ಸೇರಲು ಪ್ರೇರೇಪಣೆ ನೀಡಿದ ನಿವೃತ್ತ ಕ್ಯಾಪ್ಟನ್ ಬಲ್ಯಮೀದೇರಿರ ರಾಜು ಮೊಣ್ಣಪ್ಪ ಅವರನ್ನು ಶಿಷ್ಯವೃಂದ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಗೌರವಿಸಿತು.

ದಕ್ಷಿಣ ಕೊಡಗಿನ ಬಾಡಗರಕೇರಿಯಲ್ಲಿ ಮಾಜಿ ಸುಬೇದಾರ್ ತೀತಾಮಾಡ ಭರತ್, ಐತಿಚಂಡ ನಾಚಪ್ಪ, ಮಾಪಣಮಾಡ ಮುದ್ದಪ್ಪ ಮುಂದಾಳತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸೇನೆಯಲ್ಲಿ 32 ವರ್ಷ ಕಾಲ ಉತ್ತಮ ಸಲ್ಲಿಸಿ, ಕ್ಯಾಪ್ಟನ್ ಆಗಿ ನಿವೃತ್ತಿ ಹೊಂದಿದ್ದ ಬಲ್ಯಮೀದೆರಿರ ರಾಜು ಮೊಣ್ಣಪ್ಪ ಸಾಕಷ್ಟು ಸಂಖ್ಯೆಯಲ್ಲಿ ಯವಕರು ಸೇನೆಗೆ ಸೇರಲು ಮಾರ್ಗದರ್ಶನ ನೀಡಿದ್ದರು. ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕ ಮಾತ್ರವಲ್ಲದೆ ಕೇರಳದಿಂದ ಕೂಡ ರಾಜು ಮೊಣ್ಣಪ್ಪ ಅವರ ಶಿಷ್ಯ ವೃಂದ ಭಾಗವಹಿಸಿತ್ತು.

ರಾಜು ಮೊಣ್ಣಪ್ಪ ಅವರ ಪತ್ನಿ ಜಾನಕಿ, ಮಂಜು, ಕೌಶಿ, ನೆಲ್ಲಿರ ನವೀನ್, ಅಜಿತ್, ಮುದ್ದಿಯಡ ಸಲಿನ್ ಮೊಣ್ಣಪ್ಪ, ವೈಷ್ಣವಿ ಪೂವಮ್ಮ, ಈಮಾನಿ ಬೋಜಮ್ಮ, ಹರ್ಷಿತ್ ದೇವಯ್ಯ, ದ್ರುತಿ ದೇಚಮ್ಮ, ದೀಕ್ಷಾ ದೇವಯ್ಯ ಮತ್ತಿತರರು ಈ ಸಂದರ್ಭ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net