ಕರವೇ ನೂತನ ಜಿಲ್ಲಾಧ್ಯಕ್ಷರಿಗೆ ಸನ್ಮಾನ

sanmana
Published on

ಮಡಿಕೇರಿ:

ಕರ್ನಾಟಕ ರಕ್ಷಣಾ ವೇದಿಕೆ ಟಿ. ಎ. ನಾರಾಯಣ ಗೌಡ ಬಣದ ಕೊಡಗು ಜಿಲ್ಲಾ ನೂತನ ಅಧ್ಯಕ್ಷ ಕೂಡಿಗೆಯ ಕೆ.ಪಿ. ರಾಜು ಅವರನ್ನು ಕುಶಾಲನಗರ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮತ್ತು ತಂಡದವರಿAದ ಕೂಡಿಗೆಯ ಸಹಕಾರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿ ಗೌರವಿಸಲಾಯಿತು.

ಈ ವೇಳೆ ಮಾತಾನಾಡಿ ಲೋಕೇಶ್ ಸಾಗರ್, ಕನ್ನಡ ನಾಡಿನ ನೆಲ, ಜಲ ಸಂರಕ್ಷಣೆಗೆ ಇಂಥ ಕನ್ನಡ ಪರ ಸಂಘಟನೆಗಳ ಅನಿವಾರ್ಯತೆ ಇದೆ. ಸಂಘಟನೆಯ ಮುಖೇನ ಜಿಲ್ಲೆಯಲ್ಲಿ ಕನ್ನಡ ಪರ ಚಟುವಟಿಕೆ, ಮತ್ತು ಹೋರಾಟಗಳಲ್ಲಿ ತಮ್ಮ ತಂಡವನ್ನು ತೊಡಗಿಸಿಕೊಂಡು ಕನ್ನಡದ ಬೆಳವಣಿಗೆಗೆ ಕಾರ್ಯೋನ್ಮಖರಾಗಲಿ ಎಂದರು.

ಕೂಡುಮಂಗಳೂರು ರಾಮೇಶ್ವರ ಸಹಕಾರ ಸಂಘದ ಅಧ್ಯಕ್ಷರೂ ಆಗಿರುವ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಮಾತಾನಾಡಿ ಸಂಘಟನಾ ಮನೋಭಾವದಿಂದ ಸಂಘಟಿತರಾಗಿ, ಯುವ ಸಮೂಹದೊಂದಿಗೆ ಜಿಲ್ಲೆಯ ಕನ್ನಡ ಪರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಉತ್ತಮ ತಂಡವಾಗಿ ಕಾರ್ಯ ನಿರ್ವಹಿಸುವಂತೆ ಶುಭ ಹಾರೈಸಿದರು.\

ಕನ್ನಡ ಸಿರಿ ಬಳಗ ಪ್ರಮುಖರಾದ ಕೆ.ಕೆ. ನಾಗರಾಜಶೆಟ್ಟಿ, ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಶಿವಕುಮಾರ್, ಕೂಡಿಗೆ ಹನುಮ ಸೇನಾ ಸೇವಾ ಸಮಿತಿ ಕಾರ್ಯದರ್ಶಿ ರವಿ, ಖಂಚಾAಜಿ ಧರ್ಮ, ರೈತ ಸಂಘದ ಅಧ್ಯಕ್ಷ ಕೆ.ಸಿ. ರಾಮಣ್ಣ, ಸತ್ಯನಾರಾಯಣ ವೃತ ಸಮಿತಿ ಅಧ್ಯಕ್ಷ ಗುರುಪ್ರಸಾದ್, ಉದ್ಯಮಿ ಹನುಮರಾಜ್, ಸಮಿತಿಯ ಸದಸ್ಯರಾದ ಅರುಣ್ ಮಾದಪ್ಪ, ಸಂತೋಷ, ಮಂಜುನಾಥ, ಕೂಡಿಗೆ ಡೈರಿ ನಿವೃತ್ತ ಅಧಿಕಾರಿ ವಿಶ್ವನಾಥ, ರಾಮು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net