

ಸುಂಟಿಕೊಪ್ಪ:
ಮಾನವೀಯತೆ ಚಾರಿಟೇಬಲ್ ಟ್ರಸ್ಟ್ನ ಮೊದಲ ವರ್ಷದ ವಾರ್ಷಿಕೋತ್ಸವವನ್ನು ಸಾಧಕರಿಗೆ ಸನ್ಮಾನ ಮಾಡುವ ಮೂಲಕ ಭಾನುವಾರ ಆಚರಿಸಲಾಯಿತು.
ಸಮೀಪದ ಏಳನೇ ಹೊಸಕೋಟೆ ಮಹಿಳಾ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ 7ನೇ ಹೊಸಕೋಟೆಯ ಎಸ್. ಪ್ರಶಾಂತ್ ಮತ್ತು ವೀಣಾ ರಾಮಚಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕುಡಿಯುವ ನೀರಿಗೆ ಉಂಟಾದ ಸಮಸ್ಯೆಯನ್ನು ಅರಿತು ಸೈಕಲಿನಲ್ಲಿ 26 ದಿನ ಸಂಚರಿಸಿ 31 ಜಿಲ್ಲೆ ಹಾಗೂ 2051 ಕಿಮೀ ಕ್ರಮಿಸಿ ಬಂದಿರುವ ಎಸ್. ಪ್ರಶಾಂತ್ ಮತ್ತು ಬಿದ್ದು ಸಿಕ್ಕಿದ ಹಣವನ್ನು ಪೊಲೀಸರ ಮೂಲಕ ಹಣ ಕಳೆದುಕೊಂಡವರಿಗೆ ತಲುಪಿಸಿದ ವೀಣಾ ರಾಮಚಂದ್ರ ಅವರ ಕಾಳಜಿ ಗುರುತಿಸಿ ಈ ಸನ್ಮಾನ ಮಾಡಲಾಯಿತು.
7ನೇ ಹೊಸಕೋಟೆ ಗ್ರಾ.ಪಂ. ಅಧ್ಯಕ್ಷ ಇ.ಬಿ. ಜೋಸೆಫ್, ಗ್ರಾಪಂ.ನ ಎಲ್ಲಾ ಸದಸ್ಯರುಗಳು ಈ ಸಂದರ್ಭ ಇದ್ದರು. ಸಂಸ್ಥೆಯ ಆಡಳಿತಾಧಿಕಾರಿ ಸ್ಟೇನಿ, ಖಜಾಂಚಿ ಸೌಮ್ಯಶ್ರೀ, ಕಾರ್ಯದರ್ಶಿ ಕೆ. ನಾಗೇಂದ್ರ, ಕಾನೂನು ಘಟಕದ ಮುಖ್ಯಸ್ಥೆ ಮೊನಾಲಿಸಾ ಪಟ್ಟಡ ಹಾಗೂ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ್ ಹೂಟಗಳ್ಳಿ ಈ ಸಂದರ್ಭ ಇದ್ದರು.