

ಮಡಿಕೇರಿ:
ಗಾಳಿಬೀಡು ಗ್ರಾಮ ಪಂಚಾಯತ್‌ಗೆ "ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸತತ್ ವಿಕಾಸ ಪುರಸ್ಕಾರ" ಪ್ರಶಸ್ತಿ ಲಭಿಸುವಲ್ಲಿ ತಾಂತ್ರಿಕವಾಗಿ ಸಹಕರಿಸುವ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸುವಲ್ಲಿ ಪಂಚಾಯತ್‌ಗೆ ತಾಂತ್ರಿಕವಾಗಿ ಸಾಥ್ ನೀಡಿದ ತಂಡಕ್ಕೆ ಮಡಿಕೇರಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಈಚೆಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಮಡಿಕೇರಿ ತಾಲೂಕು ಪಂಚಾಯತ್‌ನ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಳಿಬೀಡು ಗ್ರಾಮ ಪಂಚಾಯತ್‌ನ ಸಂಪೂರ್ಣ ವಿಡಿಯೋ ಡಾಕ್ಯುಮೆಂಟರಿ ಮಾಡಲು ಸ್ಕ್ರಿಪ್ಟ್ ಬರೆದ ಚೋಕಿರ ಅನಿತಾ ದೇವಯ್ಯ, ಆಡಿಯೋ ರೆಕಾರ್ಡಿಂಗ್ ಮಾಡಿದ ಸೌಕತ್ ಅಲಿ, ಹಿನ್ನೆಲೆ ಧ್ವನಿ ನೀಡಿದ ಥಾಮಸ್ ಅಲೆಕ್ಸಾಂಡರ್, ವಿಡಿಯೋ ಎಡಿಟಿಂಗ್ ಮಾಡಿದ ಲತೀಶ್ ಪೂಜಾರಿ ಅವರುಗಳನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಮಡಿಕೇರಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಶೇಖರ್, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಹೇಮಂತ್, ಗಾಳಿಬೀಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿ ಕಿರಣ್ ಕೆ.ಎ. ಹಾಗೂ ಮಡಿಕೇರಿ ತಾಲೂಕು ಪಂಚಾಯತ್ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ತಾಲೂಕು ಪಂಚಾಯತ್ ಸಿಬ್ಬಂದಿ ವರ್ಗ ಈ ಸಂದರ್ಭ ಹಾಜರಿದ್ದರು.