32 ಶಿಬಿರ,600 ಜನರಿಂದ ಸಂಸ್ಕೃತ ಕಲಿಕೆ

IMG_20230721_113440_731-1.jpg
Published on

ಹುಬ್ಬಳ್ಳಿ: ಇಲ್ಲಿಯ ಸಂಂಸ್ಕೃತ ಭಾರತಿ ಹಾಗೂ ಮಜೇಥಿಯಾ ಫೌಂಡೇಷನ್ ಸಹಯೋಗದಲ್ಲಿ ಆರಂಭಿಸಲಾಗಿರುವ ಸಂಸ್ಕೃ ತ ಕಲಿಯೋಣ ಅಭಿಯಾನದಲ್ಲಿ ಸುಮಾರು 600 ಜನರು ಉಪಯೋಗ ಪಡೆದುಕೊಂಡಿದ್ದಾರೆ ಎಂದು ಸಂಸ್ಕೃ ತಾಮೃತಂ ಅಭಿಯಾನದ ಸದಸ್ಯ ಸತೀಶ ಮೂರೂರ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಶುಲ್ಕ ಇಲ್ಲದೇ ಸಂಸ್ಕೃ ತ ಕಲಿಸುವ ಅಭಿಯಾನ ಇದಾಗಿದೆ. ಜಾತಿ, ಮತ, ಪಂಥ ಎಂಬ ಭೇದ ಇಲ್ಲಿಲ್ಲ. ಯಾರೇ ಆಗಲಿ ಸಂಸ್ಕೃ ತ ಭಾಷಾ ಪ್ರೇಮಿಗಳು ಈ ವಿಶೇಷ ಶಿಬಿರದಲ್ಲಿ ಪಾಲ್ಗೊಂಡು ಕಲಿಯಬಹುದು.

ಸಂಸ್ಕೃ ತದಿಂದ ಹೆಚ್ಚಿನ ಜ್ಞಾನ ಪ್ರಾಪ್ತಿಯಾಗುತ್ತದೆ. ನೆನಪಿನ ಶಕ್ತಿ ಹೆಚ್ಚುತ್ತದೆ. ಈಗಾಗಲೇ 32 ಶಿಬಿರಗಳನ್ನು ನಗರದ ವಿವಿಧೆಡೆ ಮಾಡಲಾಗಿದೆ ಎಂದರು.

ಸಂಸ್ಕೃ ತಾಮೃತಂ ಇದೊಂದು ಭಾಷಾ ಪ್ರೇಮಿಗಳ ಹಬ್ಬವಾಗಿದೆ. ಕಳೆದ ಎರಡು ತಿಂಗಳ ಹಿಂದೆ ಆರಂಭಿಸಲಾಗಿದೆ. ವಿಶ್ವ ಸಂಸ್ಕೃತ ದಿನದ ಅಂಗವಾಗಿ ಆಗಸ್ಟ್ 31ರಂದು ಅಭಿಯಾನ ಸಮಾರೋಪ ಏರ್ಪಡಿಸಲಾಗಿದೆ. ಆ ದಿನ ಸಂಸ್ಕೃತ ವಿಶೇಷ ಪ್ರದಶಿರ್ನಿ, ಪುಸ್ತಕ ಮಾರಾಟ, ಸಾರ್ವಜನಿಕ, ಸಾಮಾಜಿಕ ಕಾರ್ಯಕರ್ತರ ಭಾಗಿ ಹಾಗೂ ನಾಟಕಗಳು ನಡೆಯಲಿವೆ ಎಂದರು.

ಸಂಸ್ಕೃತವು ಸಾಮರಸ್ಯ ಏರ್ಪಡಿಸುವ ಭಾಷೆಯಾಗಿದೆ. ಬೇರೆ ಬೇರೆ ಜಿಲ್ಲೆಯಿಂದಲೂ ಸಹ ಶಿಕ್ಷಕರು, ಸಾರ್ವಜನಿಕರು ಬಂದು ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ಎಂಟು ಶಾಲೆಗಳಲ್ಲಿ ಶಿಬಿರಗಳು ನಡೆದಿದ್ದು, ಇನ್ನಷ್ಟು ಶಾಲೆಗಳಲ್ಲಿ ಏರ್ಪಡಿಸುವ ಉದ್ದೇಶವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net