

ಹುಬ್ಬಳ್ಳಿ: ಮಕರ ಸಂಕ್ರಮಣವು ರೈತರಿಗೆ ಸುಗ್ಗಿಯ ಸಂಕೇತವಾಗಿ ಹೊಸ ವರ್ಷದ ಮೊದಲ ಹಬ್ಬವಾಗಿ ಇಡೀ ಮಾನವ ಸಮುದಾಯಕ್ಕೆ ಹೊಸತನ್ನು ತರುವುದಾಗಿದೆ. ನಗರದ ಗಣೇಶಪೇಟ ಭಾಗದಲ್ಲಿರುವ ತಮಿಳಿಗರು ಆಚರಿಸುವ ಪೊಂಗಲ್ ಆಚರಣೆಯಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಹುಬ್ಬಳ್ಳಿಯ ಗಣೇಶಪೇಟದಲ್ಲಿ ಪೊಂಗಲ್ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಬ್ಬಹರಿದಿನಗಳು ನಮ್ಮ ಸಂಸ್ಕೃತಿ ಸಂಸ್ಕಾರ, ಸಂಪ್ರದಾಯಗಳ ಒಂದು ಭಾಗವಾಗಿದೆ. ಪೊಂಗಲ್ ತಮಿಳು ನಾಡಿನಲ್ಲಿ ಆಚರಿಸಲಾಗುವ ದೊಡ್ಡ ಮತ್ತು ಅತ್ಯಂತ ಜನಪ್ರಿಯ ಹಬ್ಬವಾಗಿದೆ. ಇದು ದಕ್ಷಿಣ ಭಾರತದ ಸುಗ್ಗಿಯ ಹಬ್ಬ ಎಂದರು.
ಭಾರತ ದೇಶಕ್ಕೆ ಕೃಷಿ ಒಂದು ಆರ್ಥಿಕತೆಯ ಮೂಲವಾಗಿದೆ. ಕೃಷಿಯೊಂದಿಗೆ ಸಂಬಂಧ ಹೊಂದಿರುವ ಗ್ರಾಮಗಳು ಪೊಂಗಲ್ ಮತ್ತು ಸಂಕ್ರಮಣ ಆಚರಿಸುತ್ತವೆ. ಈ ಹಬ್ಬದ ಆಚರಣೆಯಲ್ಲಿ ಸಮರ್ಪಣಾ ಭಾವವಿದೆ ಎಂದು ಹೇಳಿದರು.