ಕೆಎಲ್‌ಇ ಶಾಲೆಯಲ್ಲಿ ಸಂಕ್ರಾಂತಿ ಸಡಗರ

h14-kle
Published on

ಹುಬ್ಬಳ್ಳಿ: ಸಮೀಪದ ಕೊಟಗೊಂಡಹುಣಸಿಯ ಕೆಎಲ್‌ಇ ಶಾಲೆಯಲ್ಲಿ ಶನಿವಾರ ವಿಶಿಷ್ಟವಾಗಿ ವಾರ್ಷಿಕ ಸ್ನೇಹ ಸಮ್ಮೇಳನ ಏರ್ಪಡಿಸಲಾಗಿತ್ತು.
ಗ್ರಾಮೀಣ ಸೊಗಡು ಬಿಂಬಿಸುವ ಸಂಕ್ರಾಂತಿ ಹಬ್ಬ ಆಚರಿಸಲಾಯಿತು. ರಾಶಿ ಪೂಜೆ, ಮೇಟಿ ಮೆರಗು, ಎತ್ತಿನ ಬಂಡಿ ಹಬ್ಬಕ್ಕೆ ಮೆರಗು ತಂದವು.
ಗಾಯಕಿ ನಿವೇದಿತಾ ಹೊಸಮನಿ ಭಾವಗೀತೆ, ಜಾನಪದ ಗೀತೆ ಹಾಡಿ ಪ್ಷೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದವು. ಐವರು ಹಿರಿಯ ದಂಪತಿಗೆ ಬಾಗಿನ ನೀಡಲಾಯಿತು. ಅತ್ಯುತ್ತಮ ಭಾರತೀಯ ತೊಡುಗೆ ಸ್ಪರ್ಧೆಯಲ್ಲಿ ಪಾಲಕರು ಭಾಗವಹಿಸಿದ್ದರು.
ನೃತ್ಯಗಳೊಂದಿಗೆ ರಸ ಪ್ರಶ್ನೆ, ಫ್ಯಾಶನ್ ಶೋ, ಸುಗ್ಗಿ ಹಾಡು ನಡೆದವು. ಮಕ್ಕಳು ಹಳ್ಳಿ ಶೈಲಿಯ ಉಡುಗೆ ತೊಟ್ಟು ಜೈಹೋಎಂದು ವೀರ ಯೋಧರನ್ನು ಸ್ಮರಿಸಿದರು.
ಮುಖ್ಯ ಶಿಕ್ಷಕಿ ಶ್ವೇತಾ ಸಂಗಮ್, ಡಾ. ಪ್ರಭಾಕರ ಅಡಗೆ, ಡಾ. ರಾಜಶೇಖರ ಸವಣೂರ, ಸಾವಯವ ಕೃಷಿಕ ಸಂತೋಷ ಹಿರೇಮಠ, ಹೇಮಂತ ಉಳ್ಳಾಗಡ್ಡಿ, ವಿಜಯಕುಮಾರ ಗಾಯಕ್ವಾಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net