ಮಂಡ್ಯ ದ್ವಾರಕಾನಗರದಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮ ಹೆಚ್ಚಿಸಿದ ಗೋವುಗಳ ಪೂಜೆ

15_01_Mdy_04(Govu Pooje)
Published on

ಮಂಡ್ಯ: ಇಲ್ಲಿನ ದ್ವಾರಕಾನಗರದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಗೋ ರಕ್ಷಣಾ ಸಮಿತಿ ವತಿಯಿಂದ ಮೂರನೇ ವರ್ಷದ ಗೋವುಗಳಿಗೆ ಪೂಜಾ ಕಾರ್ಯಕ್ರಮ ನಡೆಯಿತು.

ಬಡಾವಣೆಯ ಮಹಿಳೆಯರು ಗೋವುಗಳಿಗೆ ಪೂಜೆ ಸಲ್ಲಿಸಿ ಅಕ್ಕಿ-ಬೆಲ್ಲ ನೀಡಿ ಧನ್ಯತಾ ಭಾವ ಮೆರೆದರು. ಅಂತೆಯೇ ಹೆಣ್ಣು ಮಕ್ಕಳು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಎಳ್ಳು ಬೆಲ್ಲ ಬೀರಿ ಸಂಭ್ರಮಿಸಿದರು. ಇದೇ ವೇಳೆ ನಾಗರಿಕರಿಗೆ ಪೊಂಗಲ್, ಸಿಹಿ ವಿತರಿಸಲಾಯಿತು.

ಗೋರಕ್ಷಕ ಸಮಿತಿ ಅಧ್ಯಕ್ಷ ಎಚ್.ಆರ್.ಅಶೋಕ್‌ಕುಮಾರ್ ಮಾತನಾಡಿ, ದೇಸಿ ಗೋವುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ನಮ್ಮ ಸಮಿತಿಯಿಂದ ಮಾಡುತ್ತಿದ್ದೇವೆ. ಗೋವುಗಳಿಂದ ಆಗುವ ಅನುಕೂಲವನ್ನು ದೇಶದಲ್ಲೆಡೆ ಪಸರಿಸುವಂತಾಗಬೇಕು. ದೇಶಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನವನ್ನು ರೈತರ ಸೂರ್ಯ ದೇವರಿಗೆ ನಮನ ಸಲ್ಲಿಸುತ್ತಾರೆ. ಮತ್ತು ಉತ್ತಮ ಸಲನ್ನು ಬಯಸುತ್ತಾರೆ. ಅದರಂತೆ ನಾವು ಭತ್ತ ರಾಗಿ ರಾಶಿ ಮಾಡಿ ಗೋವುಗಳಿಗೆ ಸಿಂಗರಿಸಿ ಪೂಜೆ ಸಲ್ಲಿಸುತ್ತಿದ್ದೇವೆ ಎಂದರು.

ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ಬಿಜೆಪಿ ಮುಖಂಡರಾದ ಇಂಡುವಾಳು ಎಸ್.ಸಚ್ಚಿದಾನಂದ, ಅಶೋಕ್ ಜಯರಾಂ, ಸಮಿತಿಯ ರಘು, ವೀರಭದ್ರ, ಬಸವರಾಜು, ಪ್ರಕಾಶ್, ಮಲ್ಲೇಶ್, ದುರ್ಗೆಗೌಡ, ಪ್ರಭು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net