

ವಿಜಯವಾಣಿ ಸುದ್ದಿಜಾಲ ಧಾರವಾಡ
ವರ್ಷದ ಮೊದಲ ಹಬ್ಬ ಮಕರ ಸಂಕ್ರಾ೦ತಿ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಂಕ್ರಾ೦ತಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.
ಸಂಕ್ರಾ೦ತಿ ವಿಶೇಷ ಅಡುಗೆ ಖಾದ್ಯಗಳ ಹಬ್ಬ. ಮಾದಲಿ, ಸಜ್ಜೆ, ಜೋಳದ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿ, ಹೆಸರುಕಾಳು, ಅವರೆಕಾಳು, ಕರಿಹಿಂಡಿ, ಶೇಂಗಾ ಚಟ್ನಿ, ಗುರೆಳ್ಳ ಚಟ್ನಿ, ಹೋಳಿಗೆ, ಚಿತ್ರಾನ್ನ, ಮೊಸರನ್ನ ಸೇರಿ ತರಹೇವಾರಿ ಖಾದ್ಯಗಳು ಹಬ್ಬದ ವಿಶೇಷ. ರಜೆ ಇದ್ದುದರಿಂದ ಜನ ನಗರದ ಉದ್ಯಾನಗಳಿಗೆ ಲಗ್ಗೆ ಇಟ್ಟಿದ್ದರು. ಮಕ್ಕಳು, ಕುಟುಂಬ ಸದಸ್ಯರೊಂದಿಗೆ ಉದ್ಯಾನಗಳಲ್ಲಿ ಕುಳಿತು ಸಹಭೋಜನ ಸವಿದರು. ಕಿತ್ತೂರು ಚನ್ನಮ್ಮ ಉದ್ಯಾನ, ಸಾಧನಕೇರಿ ಉದ್ಯಾನಗಳು ಜನರಿಂದ ತುಂಬಿದ್ದವು.