ಬಸರಾಳಿನಲ್ಲಿ ಸುಗ್ಗಿ ಸಂಭ್ರಮ: ಕಿಚ್ಚು ಹಾಯಿಸಿದ ಯುವಕರು

Sankranti festival celebration in Basaralu village Mandya
Published on

ಮಂಡ್ಯ: ತಾಲೂಕಿನ ಬಸರಾಳು ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿತ್ತು.

ಗ್ರಾಮದ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ದೇವರಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಿ, ಅಭಿಷೇಕ ನೆರವೇರಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ಸ್ವಾಮಿಯ ದರ್ಶನ ಮಾಡಿ ಪೂಜೆ ನೆರವೇರಿಸಿದರು. ನೂರಾರು ವರ್ಷದ ಸಂಪ್ರದಾಯದಂತೆ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದ ಬಳಿ ಇರುವ ಪುರಾತನ ಹೆಬ್ಬಾಗಿಲು ನಡುವೆ ಸಂಜೆ ರಾಸುಗಳನ್ನು ಕಿಚ್ಚು ಹಾಯಿಸಲು ಚಾಲನೆ ನೀಡಲಾಯಿತು.

ಸೂರ್ಯಾಸ್ತವಾಗುತ್ತಿದ್ದಂತೆ ಅಗ್ನಿಸ್ಪರ್ಶ ಮಾಡಿದ ಬಳಿಕ ಯುವಕರು ರಾಸುಗಳು ಕಿಚ್ಚು ಹಾಯಿಸಿದರು. ಈ ವೇಳೆ ತಮ್ಮ ಜಾನುವಾರು, ಆಡು, ಕುರಿಗಳಿಗೆ ವಿವಿಧ ಬಗೆಯ ಹೂವು ಬಣ್ಣ ಬಲೂನ್‌ಗಳಿಂದ ಅಲಂಕರಿಸಿ ಸಂಭ್ರಮಿಸಿದರು. ಕಾಲಭೈರವೇಶ್ವರ ಸ್ವಾಮಿಯ ದೇವಾಲಯದ ಅರ್ಚಕರು ತೀರ್ಥ ಹಾಗೂ ಉಗ್ಗಿ ಅನ್ನದ ಪ್ರೋಕ್ಷಣೆ ಮಾಡಿದರು. ಗ್ರಾಮದ ಯುವಕರ ತಂಡ ಬಸವನನ್ನು ಹಿಡಿದು ದೇವಸ್ಥಾನದ ಬಳಿ ಸ್ನಾನ ಮಾಡಿಸಿ ಎಣ್ಣೆ ಸ್ನಾನ ಮಾಡಿಸಿ ಬಣ್ಣ ಬಳಿದು ವಿಶೇಷ ಬಗೆಯ ಬಲೂನ್ ಗಳಿಂದ ಹೂವುಗಳಿಂದ ಅಲಂಕರಿಸಿ ಕಿಚ್ಚು ಹಾಯಿಸಿದ್ದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net