ಕೋಣಂದೂರು ಮಠದಲ್ಲಿ ಸಂಕ್ರಾಂತಿ ಜಾತ್ರೆ ಸಂಭ್ರಮ

Konanduru Sree
Published on

ರಿಪ್ಪನ್‌ಪೇಟೆ: ಸಮೀಪದ ಕೋಣಂದೂರಿನ ಶಿವಲಿಂಗೇಶ್ವರ ಬೃಹನ್ಮಠದಲ್ಲಿ ಜ.14ರಂದು ಮಕರ ಸಂಕ್ರಾಂತಿ ಜಾತ್ರಾಮಹೋತ್ಸವ, ಧನುರ್ಮಾಸ ಶಿವಪೂಜಾನುಷ್ಠಾನ, ಶ್ರೀ ಶಿವಲಿಂಗೇಶ್ವರ ಪ್ರಶಸ್ತಿ ಪ್ರದಾನ, ಧರ್ಮ ಜಾಗೃತಿ ಸಭೆ ಆಯೋಜಿಸಲಾಗಿದೆ ಎಂದು ಮಠದ ಶ್ರೀಗಳಾದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.

ಆನಂದಪುರದ ಮುರುಘಾರಾಜೇಂದ್ರ ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವೀರಾಪುರ ಹಿರೇಮಠದ ಡಾ. ಶ್ರೀ ಮರುಳಸಿದ್ದ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಹೊನ್ನಾಳಿ ಹಿರೇಕಲ್ಮಠದ ಡಾ. ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ರೆಟ್ಟಿಹಳ್ಳಿ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದು, ಧರ್ಮ ಜಾಗೃತಿ ಸಮಾರಂಭವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು. ಶಿವಲಿಂಗೇಶ್ವರ ಪಂಚಾಂಗವನ್ನು ಶಾಸಕ ಆರಗ ಜ್ಞಾನೇಂದ್ರ ಬಿಡುಗಡೆಗೊಳಿಸುವರು ಎಂದರು.
ಖ್ಯಾತ ವೈದ್ಯ ಡಾ. ಗುರುರಾಜ್ ಅವರಿಗೆ ಶ್ರೀ ಮಠದಿಂದ ಕೊಡಮಾಡುವ ಶ್ರೀ ಶಿವಲಿಂಗೇಶ್ವರ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಾಗರ ಅಕ್ಷಯ ಬ್ಯಾಂಕ್ ಆಧ್ಯಕ್ಷ ದಿನೇಶ್ ತಟ್ಟೆಕೊಪ್ಪ, ವರ್ತಕ ಸೋಮಶೇಖರ ಈರಪ್ಪ ಹಿರೇಬಿದರಿ, ಖ್ಯಾತ ನಾಟಿ ವೈದ್ಯ ಶಿವನಗೌಡ ಅವರನ್ನು ಸನ್ಮಾನಿಸಲಾಗುವುದು ಎಂದರು.
ಶಾಸಕರಾದ ಡಿ.ಜಿ.ಶಾಂತನಗೌಡ, ಯು.ಬಿ.ಬಣಕಾರ್, ಎಂಎಲ್‌ಸಿ ರುದ್ರೇಗೌಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಎಚ್.ವಿ.ಮಹೇಶ್ವರಪ್ಪ ಭಾಗವಹಿಸುವರು. ಕ್ಯಾಸನೂರು ಮಠದ ಶ್ರೀ ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯರು, ತಾವರೆಕೆರೆ ಶೀಲಾಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯರು ಸದಾಶಯ ನುಡಿ ಸಲ್ಲಿಸುವರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net