ಬಣಜಿಗ ಸಮಾಜದಿಂದ ಸಂಕ್ರಾಂತಿ ಸಂಭ್ರಮ

22 NRD 5
Published on

ನರಗುಂದ: ತಾಲೂಕು ಬಣಜಿಗ ಸಮಾಜ ಮಹಿಳಾ ಘಟಕದ ವತಿಯಿಂದ ಸಂಕ್ರಾಂತಿ ಸಂಭ್ರಮವನ್ನು ಬಸವೇಶ್ವರ ಸಮುದಾಯ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ವಿರಕ್ತಮಠದ ಶಿವಕುಮಾರ ಸ್ವಾಮೀಜಿ ಚಾಲನೆ ನೀಡಿದರು. ಸಮಾಜದ ಮಹಿಳಾ ಘಟಕದ ಗೌರವಾಧ್ಯಕ್ಷೆ ಲೀಲಾವತಿ ಕರಬಸಪ್ಪ ಹಸಬಿ, ಅನ್ನಪೂರ್ಣಾ ಶಿವಪುತ್ರಪ್ಪ ನಂದಿ ಹಾಗೂ ಸುಕನ್ಯಾ ಸಾಲಿ, ಲಿಂಗರಾಜ ಕಾಲಚೆಟ್ಟಿ, ಉಪಾಧ್ಯಕ್ಷೆ ಸುಕನ್ಯಾ ಮಾಳವಾಡ, ಜಯಶ್ರೀ ವಾಲಿ, ಸಂಘದ ಪ್ರಧಾನ ಕಾರ್ಯದರ್ಶಿ ವಿದ್ಯಾ ಚನ್ನಪ್ಪ ಸುಳ್ಳದ, ಕೋಶಾಧ್ಯಕ್ಷರಾದ ಸುನಂದಾ, ವೀರಪ್ಪ, ನಂದಿ, ನಂದಾ ಚನ್ನಪ್ಪ ಕೋರಿ, ಶ್ರೀದೇವಿ ಕೋತಿನ ಪಾಲ್ಗೊಂಡಿದ್ದರು, ಗಿರಿಜಾ ಅಂಗಡಿ ನಿರೂಪಿಸಿದರು. ಜಯಶ್ರೀ ಹಸಬಿ ಉಪನ್ಯಾಸ ನೀಡಿದರು. ತಾಲೂಕು ಬಣಜಿಗ ಸಮಾಜದ ಎಸ್.ಬಿ. ಗೋವೇಶ್ವರ, ಸಿ.ಎಚ್. ಕೋರಿ, ಶಂಕ್ರಣ್ಣ ವಾಳದ, ವಿ.ಕೆ. ಮರಿಗುದ್ದಿ, ಕೊಟ್ರೇಶ ಕೊಟ್ರಶೆಟ್ಟರ, ಬಿ.ಎಸ್. ನಾಶಿ, ಬಿ.ಎಸ್. ಅಂಗಡಿ, ಚನ್ನಪ್ಪ ಕೋರಿ, ದುಂಡಪ್ಪ ವಾಳದ, ಉಮೇಶ ಕಾಲಚೆಟ್ಟಿ, ಚನ್ನು ನಂದಿ, ಸುಬಾಷ ಕೋತೀನ, ಸೋಮು ಹೊಂಗಲ ಉಪಸ್ಥಿತರಿದ್ದರು. ಮೇಘಾ ಗೊವೇಶ್ವರ ಸಂಗಡಿಗರಿಂದ ಜನಪದ ನೃತ್ಯ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net