ಬಿ.ಹೊಸೂರು ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ

DSC_0396
Published on

ಮಂಡ್ಯ: ತಾಲೂಕಿನ ಬಿ.ಹೊಸೂರು ಗ್ರಾಮದಲ್ಲಿ ಸಂಕ್ರಾಂತಿ ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ಉತ್ತಮ ಅಲಂಕಾರ ಜೋಡಿತ್ತುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಸಡಗರಿದಂದ ನಡೆಯಿತು.

ಉದ್ಯಮಿ ರಾಮ್‌ ಮೋಹನ್ ಮಾತನಾಡಿ, ರಾಜಕೀಯ ಬಿಟ್ಟು ಎಲ್ಲರೂ ಒಟ್ಟಾಗಿ ಸೇರಿ ಸಂಕ್ರಾಂತಿ ಸುಗ್ಗಿ ಸಂಭ್ರಮ ಆಚರಿಸುತ್ತಿರುವುದು ಸಂತೋಷ ತರಿಸಿದೆ. ಎಲ್ಲರ ಮನೆಯಲ್ಲೂ ಜೋಡೆತ್ತುಗಳು ಮತ್ತು ಧಾನ್ಯದ ರಾಶಿಗಳು ಮನೆ ಸೇರಲಿ ಎಂದು ಹಾರೈಸಿದರು.

ಬಿ.ಹೊಸೂರು ಗ್ರಾಮವು ಮಾದರಿ ಗ್ರಾಮವಾಗಿದೆ. ಸಾಂಸ್ಕೃತಿಕ ಕಲೆಗಳನ್ನು ಬಿಂಬಿಸುವ ಹಾಗೂ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಜನಪದ ರೀತಿಯಲ್ಲಿಯೇ ಆಯೋಜಿಸಿರುವ ಈ ಸಂಭ್ರಮವು ಎಲ್ಲರಿಗೂ ಸುಖ ಶಾಂತಿ ನೀಡಲಿ ಎಂದು ದೇವರ ಬಳಿ ಪ್ರಾರ್ಥಿಸುತ್ತೇನೆ, ಇದೇ ರೀತಿ ಒಗ್ಗಟ್ಟಾಗಿ ಹಬ್ಬ ಆಚರಿಸುವುದು ನಿರಂತರವಾಗಿರಲಿ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಉತ್ತಮ ಅಲಂಕಾರಿಕ ಎತ್ತುಗಳ ಜೋಡಿಗೆ ಬಹುಮಾನ ನೀಡಲಾಯಿತು. ಗ್ರಾಮದ ಯಜಮಾನರು ಹಾಗೂ ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net