ಸಂಕೇಶ್ವರ ಪುರಸಭೆಗೆ ಸಚಿನ ಭೋಪಳೆ ಉಪಾಧ್ಯಕ್ಷ

24Snk2
Published on

ಸಂಕೇಶ್ವರ: ಪಟ್ಟಣದ ಪುರಸಭೆಗೆ ಉಪಾಧ್ಯಕ್ಷರಾಗಿ ಬಿಜೆಪಿಯ ಸಚಿನ ಭೋಪಳೆ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಸಚಿನ ಭೋಪಳೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ಮಂಜುಳಾ ನಾಯಿಕ ಘೋಷಿಸಿದರು.

ಶಾಸಕ ನಿಖಿಲ್ ಕತ್ತಿ ಮಾತನಾಡಿ, ಎಲರ‌್ಲೂ ಒಂದಾಗಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಪುರಸಭೆ ಅಧ್ಯಕ್ಷೆ ಸೀಮಾ ಹತನೂರೆ, ಪ್ರಮೋದ ಹೊಸಮನಿ, ಗುರುರಾಜ ಕುಲಕರ್ಣಿ, ಅಮರ ನಲವಡೆ, ಸಂಜಯ ಶಿರಕೋಳಿ, ಶಿವಾನಂದ ಮುಡಸಿ, ಶ್ರೀಕಾಂತ ಹತನೂರೆ, ಅಜಿತ್ ಕರಜಗಿ, ಸುನೀಲ ಪರ್ವತರಾವ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net