

ಸಂಕೇಶ್ವರ: ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಮಂಗಳವಾರ ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.
ಇಲ್ಲಿನ ರಾಣಿ ಚನ್ನಮ್ಮ ಸರ್ಕಲ್ನಲ್ಲಿ ಮಕ್ಕಳು ಕೋಲಾಟ ಹಾಗೂ ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ಸಂಚರಿಸಿತು.
ಗ್ರಾಮೀಣ ಸೊಗಡಿನ ಸಂಸ್ಕೃತಿ, ಪರಂಪರೆ ಬಿಂಬಿಸುವ ವೇಷಭೂಷಣ ತೊಟ್ಟು ಮಕ್ಕಳು ಗಮನ ಸೆಳೆದರು. ಕನ್ನಡ ನಾಡು, ನುಡಿ, ನೆಲ ಹಾಗೂ ಭಾಷೆ ಕುರಿತಾಗಿ ಮಕ್ಕಳು ಭಾಷಣ ಮಾಡಿದರು.
ಸಂಸ್ಥೆ ಅಧ್ಯಕ್ಷ ಮಹೇಶ ದೇಸಾಯಿ, ಕಾರ್ಯದರ್ಶಿ ಎಂ.ಕೆ.ಪಾಟೀಲ, ಜೈ ಮಲ್ಹಾರ ಬ್ಯಾಂಕ್ ಸಿಇಒ ಸುಷ್ಮಾ ಪಾಟೀಲ, ಆಡಳಿತ ಮಂಡಳಿ ಸದಸ್ಯರಾದ ಸುರೇಖಾ ಪಾಟೀಲ, ಮುಖ್ಯೋಪಾಧ್ಯಾಯರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.