ಸಂಕಥನ ಎನ್ನುವುದು ಪಾರಿಭಾಷಿಕ ಶಬ್ದ

Sankathana
Published on

ಶಿರಸಿ: ಸಂಕಥನ ಎನ್ನುವುದು ಪಾರಿಭಾಷಿಕ ಶಬ್ದವಾಗಿದ್ದು, ಭಾರತೀಯ ವಾಗ್ಮಯ ಪ್ರಪಂಚದಲ್ಲಿ ಸಂಕಥನ ಎನ್ನುವ ಶಬ್ದವಿಲ್ಲ. ಇದು ಪಾಶ್ಚಾತ್ಯ ಸಾಹಿತ್ಯ ವಲಯದಲ್ಲಿ ಹೆಸರಾಗಿದ್ದು, ವಿಮರ್ಶಕರು, ಭಾಷಾ ಶಾಸ್ತ್ರಜ್ಞರು ಹೆಚ್ಚಾಗಿ ಬಳಸುತಿದ್ದರು. ಈಗಲೂ ಬಳಸುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ನೆಮ್ಮದಿ ಕುಟೀರದಲ್ಲಿ ಆರ್.ಡಿ. ಹೆಗಡೆ ಆಲ್ಮನೆ ಅವರ ’ಸಂಕಥನ’ ಅಂಕಣ ಬರಹದ ಎರಡನೇ ಆವೃತ್ತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಶಿರಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಅಧ್ಯಕ್ಷತೆ ವಹಿಸಿದ್ದರು. ಹುಳಗೋಳ ನಾಗಪತಿ ಹೆಗಡೆ ಪುಸ್ತಕ ಪರಿಚಯಿಸಿದರು. ಕೃತಿಕಾರ ಆರ್.ಡಿ. ಹೆಗಡೆ ಮಾತನಾಡಿದರು.

ಕೃಷ್ಣ ಪದಕಿ ಸ್ವಾಗತಿಸಿದರು. ವಿಮಲಾ ಭಾಗ್ವತ ಪ್ರಾರ್ಥಿಸಿದರು. ಭವ್ಯ ಹಳೆಯೂರು ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net