

ಇಳಕಲ್ಲ (ಗ್ರಾ): ಸ್ತ್ರೀ ಕುಲಕ್ಕೆ ಮಾದರಿ ವ್ಯಕ್ತಿತ್ವ ರೂಪಿಸಿಕೊಂಡು, ಕೌಟುಂಬಿಕ ಸಂಕಷ್ಟ ಮೆಟ್ಟಿ ನಿಂತು, ಸಾಮಾಜಿಕವಾಗಿ ಆದರ್ಶ ಮೌಲ್ಯ ರೂಢಿಸಿಕೊಂಡು, ಧಾರ್ಮಿಕ ಸಾಧನೆಯನ್ನು ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಾಡಿದ್ದಾರೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ರೆಡ್ಡಿ ಸಮಾಜದ ಮುಖಂಡರಾದ ಮುತ್ತಣ್ಣ ಇಂಗಳಗಿ, ರಾಯನಗೌಡ ಗೌಡರ, ಶರಣಗೌಡ ಪಾಟೀಲ, ಶರಣಗೌಡ ಕಂದಕೂರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಚಿಂಚಮಿ, ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ಸದಸ್ಯ ಅಮೃತ ಬಿಜ್ಜಳ, ನಾಮನಿರ್ದೇಶಿತ ಸದಸ್ಯರಾದ ಮಲ್ಲು ಮಡಿವಾಳರ, ರಾಧೆಶ್ಯಾಮ ದರಕ, ಮುಖಂಡರಾದ ಬಸವರಾಜ ಜಾಲಿಹಾಳ, ಅಹ್ಮದಸಾಬ್ ಬಾಗವಾನ ಕಂಡಕ್ಟರ್, ಶ್ರೀನಿವಾಸ ಗುರಂ ಮತ್ತಿತರರಿದ್ದರು.
ತಹಸೀಲ್ದಾರ್ ಕಚೇರಿಯಲ್ಲಿ ಜಯಂತ್ಯುತ್ಸವ
ಗರದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಸತೀಶ ಕೂಡಲಗಿ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಮಲ್ಲಮ್ಮನವರು ನಡೆದುಕೊಂಡು ಬಂದ ಮಾರ್ಗವನ್ನು ವಿವರಿಸಿ ಅವರ ತತ್ವ ಸಿದ್ಧಾಂತಗಳನ್ನು ಎಲ್ಲರೂ ಪಾಲಿಸಬೇಕು ಎಂದರು.
ರೆಡ್ಡಿ ಸಮಾಜದ ಮುಖಂಡರಾದ ಎಂ.ಆರ್. ಪಾಟೀಲ, ಶಶಿಕುಮಾರ ಗುಗಿಹಾಳ, ದೊಡ್ಡಪ್ಪ ಕವಡಿಮಟ್ಟಿ, ರಾಯನಗೌಡ ಗೌಡರ, ವಿಜು ಹೇರೂರು, ಶರಣಗೌಡ ತಹಸೀಲ್ದಾರ್ ಇದ್ದರು.
ಹೇಮರೆಡ್ಡಿ ಮಲ್ಲಮ್ಮ ವತ್ತದಲ್ಲಿ ಜಯಂತಿ ಆಚರಣೆ:
ನಗರದ ಸಿದ್ಧಾರ್ಥ ಪ್ರೌಢ ಶಾಲೆಯ ಮುಂದೆ ಇರುವ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ವೃತ್ತದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವದ ಅಂಗವಾಗಿ ಸಮಾಜದ ಮುಖಂಡರು ವೃತ್ತಕ್ಕೆ ಪೂಜೆ ಸಲ್ಲಿಸಿ, ಮಾರ್ಲಾಪಣೆ ಮಾಡಿದರು. ರಾಜುಗೌಡರ ಪಾಟೀಲ, ಅರವಿಂದ ಗೌಡರ, ರಾಯನಗೌಡ ಗೌಡರ, ವಿಜಯ , ವಿಜಯ ಹೇರೂರು, ಶಶಿಕುಮಾರ ಗುಗಿಹಾಳ, ಮಲ್ಲಪ್ಪ, ಡಾ.ಸಿದ್ದನಗೌಡ ಪಾಟೀಲ ಮತ್ತಿತರರಿದ್ದರು.