ಬಿ.ವಿ.ರವಿ ರೈಗೆ ಶಂಕರ ಹೆಗಡೆ ಪ್ರಶಸ್ತಿ ಪ್ರದಾನ

kls award
ಬೆಂಗಳೂರಿನಲ್ಲಿ ಚಲನಚಿತ್ರ ನಿರ್ಮಾಪಕ ಕಳಸ ಬಿ.ವಿ.ರವಿ ರೈಗೆ ಮೆಣಸೆ ಶಂಕರ ಹೆಗಡೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಂದ್ರಶೇಖರ ತುಂಬರಮನೆ, ಜಯಮಾಲಾ, ಬಿ.ಎಸ್.ಶ್ರೀಧರ್, ಪ್ರಮೋದ ಶೆಟ್ಟಿ, ಸಾಧ್ವಿನಿ ಕೊಪ್ಪ, ರಮೇಶ್ ಬೇಗಾರ್ ಇತರರಿದ್ದರು.
Published on

ಕಳಸ: ಚಲನಚಿತ್ರ ನಿರ್ಮಾಪಕ ಕಳಸ ಬಿ.ವಿ.ರವಿ ರೈ ಅವರಿಗೆ ಮೆಣಸೆ ಶಂಕರ ಹೆಗಡೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಂಗಳೂರಿನ ಎಚ್.ಎನ್.ಕಲಾ ಕ್ಷೇತ್ರದಲ್ಲಿ ನಡೆದ ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್, ಕೃಷಿ ಭಾರತ್ ಫೌಂಡೇಷನ್, ಇಂಡಸ್ ಹರ್ಬ್ಸ್ ಆಯೋಜಿಸಿದ ಬೆಂಗಳೂರು ಮಲೆನಾಡು ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉತ್ಸವ ಅಧ್ಯಕ್ಷ ಚಂದ್ರಶೇಖರ ತುಂಬರಮನೆ, ಮಾಜಿ ಸಚಿವೆ ಜಯಮಾಲಾ, ಅದಮ್ಯ ಚೇತನ ಸಂಸ್ಥೆಯ ತೇಜಸ್ವಿನಿ ಅನಂತಕುಮಾರ್, ಉಪ ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ ಬಿ.ಎಸ್.ಶ್ರೀಧರ್, ನಟ ಪ್ರಮೋದ ಶೆಟ್ಟಿ, ಸಾಧ್ವಿನಿ ಕೊಪ್ಪ, ರಮೇಶ್ ಬೇಗಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net