ಆರ್​ಡಿಪಿಆರ್​ ವಿವಿಗೆ ಸಿಎಂ ಅವರನ್ನು ಕುಲಾಧಿಪತಿಯನ್ನಾಗಿ ಮಾಡುವ ನಿರ್ಣಯಕ್ಕೆ ಎಸ್​.ವಿ. ಸಂಕನೂರು ವಿರೋಧ

01GDG03
Published on

ವಿಜಯವಾಣಿ ಸುದ್ದಿಜಾಲ ಗದಗ

ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ ಹಸ್ತೇಪ ಇರಬಾರದು ಎಂಬ ಹಿನ್ನೆಲೆಯಲ್ಲಿ ಅವುಗಳನ್ನು ದೇಶದಾದ್ಯಂತ ಸ್ವಾಯತ್ತ ಸಂಸ್ಥೆಗಳನ್ನಾಗಿ ರೂಪಿಸಲಾಗಿದೆ. ಈ ತತ್ವಕ್ಕೆ ವಿರೋಧವಾಗಿ ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿ ಪಂಚಾಯತ್​ರಾಜ್​ ವಿಶ್ವವಿದ್ಯಾಲಯದ ಕುಲಾಧಿಪತಿ ಸ್ಥಾನಕ್ಕೆ ರಾಜ್ಯಪಾಲರ ಬದಲಾಗಿ ಮುಖ್ಯಮಂತ್ರಿಗಳನ್ನು ನೇಮಕ ಮಾಡಲು ಇತ್ತೀಚೆಗೆ ಸಚಿವ ಸಂಪುಟದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರ ಈ ನಿರ್ಣಯದಿಂದ ವಿವಿ ಯಲ್ಲಿ ರಾಜಕೀಯ ಹಸ್ತಕ್ಷೇಪ ನೇರವಾಗಿ ಮಾಡಿದಂತಾಗಿದೆ ಎಂದು ವಿಧಾನ ಪರಿಷತ್​ ಸದಸ್ಯ ಎಸ್​. ವಿ. ಸಂಕನೂರ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ ಹಸ್ತೇಪ ಆಗುವುದರಿಂದ ಶೈಣಿಕ ವ್ಯವಸ್ಥೆ ಸಂರ್ಪೂಣ ಹಾಳಾಗುತ್ತದೆ. ರಾಜ್ಯದಲ್ಲಿ 6 ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ ಸ್ಥಾನ ಕಳೆದ ಎಳೆಂಟು ತಿಂಗಳಿಂದ ಖಾಲಿ ಇದೆ. ಸರ್ಕಾರ ನೇಮಕಕ್ಕಾಗಿ ಶೋಧನಾ ಸಮಿತಿಯನ್ನು ರಚನೆ ಮಾಡಿಲ್ಲ. ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್​ರಾಜ್​ ವಿಶ್ವವಿದ್ಯಾಲಯದ ವಿದ್ಯಾ ಪರಿಷತ್​ ಕೂಡ ರಚನೆ ಮಾಡಿಲ್ಲ. ಈ ಎಲ್ಲ ವಿಳಂಬಕ್ಕೆ ಸರ್ಕಾರವೇ ಹೊಣೆ ಆಗಿದೆ. ಹೀಗಿರುವಾಗ ಮುಖ್ಯಮಂತ್ರಿಗಳಿಗೆ ಕುಲಾದಿಪತಿ ಹುದ್ದೆ ನೀಡುವುದರಿಂದ ನಿರ್ಣಯಗಳನ್ನು ತ್ವರಿತವಾಗಿ ತೆಗೆದುಕೊಳ್ಳಬಹುದು ಎಂದು ಹೆಸರಿಸಿ ರಾಜ್ಯಪಾಲರ ಕುಲಾದಿಪತಿ ಹುದ್ದೆಯನ್ನು ಸಿಎಂ ಅವರಿಗೆ ನೀಡಲಾಗಿದೆ. ಯಾವ ಕಾರಣಕ್ಕಾಗಿ ಕುಲಾಧಿ-ಪತಿಗಳ ಅಧಿ-ಕಾರವನ್ನು ತರಾತುರಿಯಲ್ಲಿ ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸುವ ಕ್ರಮಕ್ಕೆ ಎಚ್​.ಕೆ. ಪಾಟೀಲ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ ಎನ್ನುವುದು ಯ ಪ್ರಶ್ನೆ ಆಗಿದೆ. ಇದರ ಹಿಂದೆ ಇರುವ ಉದ್ದೇಶ ಏನೆಂಬುದು ಅರ್ಥವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಸರ್ಕಾರ ಈ ನಿರ್ಣಯದಿಂದ ವಿವಿಯಲ್ಲಿನ ಶಿಕ್ಷಣ ವ್ಯವಸ್ಥೆ ಅದೋಗತಿ ತಲುಪುವ ಸಾಧ್ಯತೆಗಳು ಇರುವುದರಿಂದ ಈ ನಿರ್ಣಯವನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿಗಳನ್ನು ಕುಲಾಧಿಪತಿಗಳನ್ನಾಗಿ ಮಾಡುವುದರಿಂದ ಅತಿ ವೇಗದಲ್ಲಿ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿದೆ ಎಂದು ಸರ್ಕಾರ ಹೇಳಿಕೆ ನೀಡಿದ್ದು ಹಾಸ್ಯಾಸ್ಪದ. ಮುಖ್ಯಮಂತ್ರಿಗಳಿಗೆ ಹೆಚ್ಚಿನ ಜವಾಬ್ದಾರಿ ಹಾಗೂ ಕಾರ್ಯದ ಒತ್ತಡ ಇರುವುದರಿಂದ ವಿವಿಗಳಲ್ಲಿ ಇನ್ನೂ ಹೆಚ್ಚಿನ ವಿಳಂಬ ಆಗುವುದೇ ಹೊರತು ವೇಗವಾಗಿ ಕಾರ್ಯಗಳು ಆಗುವುದಿಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net