ಡಿಡಿಪಿಐ ವಿರುದ್ಧ ಶಿಸ್ತು ಕ್ರಮಕ್ಕೆ ಸಂಕನೂರ ಒತ್ತಾಯ; ಶಿಕ್ಷಕರ ದಿನಾಚರಣೆಯ ಹೆಸರು, ಸ್ಥಳ ಬದಲಾವಣೆ

3 Dwd 10 (S.V.Sankanur)
????????????????????????????????????
Published on

ಧಾರವಾಡ: ಧಾರವಾಡ- 71 ವಿಧಾನಸಭಾ ಕ್ಷೇತ್ರದ ಶಿಕ್ಷರರ ದಿನಾಚರಣೆಯನ್ನು ಹೆಸರು ಬದಲಾಯಿಸಿ ಶಿಕ್ಷಕರ ದಿನೋತ್ಸವ ಎಂದು ಸವದತ್ತಿಯ ನಿಕ್ಕಂ ಕಲ್ಯಾಣಮಂಟಪದಲ್ಲಿ ಮಾಡಿರುವುದು ರಾಜಕೀಯ ಪ್ರೇರಿತ ಕಾರ್ಯಕ್ರಮ. ಸ್ಥಳ ಮತ್ತು ದಿನಾಚರಣೆಯ ಹೆಸರು ಬದಲಾವಣೆ ಮಾಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಸೆ. ೫ರಂದು ದೇಶಾದ್ಯಂತ ಶಿಕ್ಷಕರ ದಿನ ಆಚರಿಸುವುದು ನಿಯಮ. ಅಲ್ಲದೆ, ಆ ದಿನದಂದು ರಜೆ ಘೋಷಿಸುವ ಪದ್ಧತಿ ಇಲ್ಲ. ಶಿಕ್ಷಕರ ದಿನಾಚರಣೆಯನ್ನು ಆಯಾ ತಾಲೂಕು ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಮಾಡುವುದು ಸಾಮಾನ್ಯ ನಿಯಮ. ಈ ಎಲ್ಲ ನಿಯಮ ಹಾಗೂ ಪದ್ಧತಿಗಳನ್ನು ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ ಗಾಳಿಗೆ ತೂರಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ಸೆ. 5ರ ಬದಲು 6ರಂದು ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಹಮ್ಮಿಕೊಳ್ಳಲು ಜ್ಞಾಪನ ಪತ್ರ ಹೊರಡಿಸಿದ್ದಾರೆ. ಇದು ಅಧಿಕಾರ ದುರುಪಯೋಗ ಮತ್ತು ನಿಯಮಬಾಹಿರ ಎಂದು ಸಂಕನೂರ ಪತ್ರದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net