ಸಂಕನೂರು ಗ್ರಾಪಂಗೆ ಫರೀದಾಬೇಗಂ ಮದಾರಿ ಅಧ್ಯಕ್ಷೆ, ಉಪಾಧ್ಯಕ್ಷರಾಗಿ ರೇಣವ್ವ ಗಂಜಾಳ ಅವಿರೋಧ ಆಯ್ಕೆ

180220 Sankanuru GP President, Vice President Selection
Published on

ಯಲಬುರ್ಗಾ: ತಾಲೂಕಿನ ಸಂಕನೂರು ಗ್ರಾಪಂಗೆ ಅಧ್ಯಕ್ಷರಾಗಿ ಫರೀದಾಬೇಗಂ ಚಾನ್‌ಸಾಬ್ ಮದಾರಿ ಹಾಗೂ ಉಪಾಧ್ಯಕ್ಷರಾಗಿ ರೇಣವ್ವ ಪವಾಡೆಪ್ಪ ಗಂಜಾಳ ಮಂಗಳವಾರ ಅವಿರೋಧ ಆಯ್ಕೆಯಾದರು.

ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಮರ್ತುಜಾ ಖಾದರ್‌ಸಾಬ್ ನದಾಫ್ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ಸರಸ್ವತಿ ದೇವೇಂದ್ರಪ್ಪ ಕದಡಿ ರಾಜೀನಾಮೆ ನೀಡಿದ್ದರಿಂದ ಎರಡೂ ಸ್ಥಾನಗಳು ತೆರವಾಗಿದ್ದವು. ಈ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಪಂ ಕಚೇರಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸಭೆ ಸೇರಲಾಗಿತ್ತು. ಒಟ್ಟು 11 ಸದಸ್ಯರ ಪೈಕಿ 8 ಜನ ಹಾಜರಾಗಿದ್ದರು. ಎರಡೂ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ತಹಸೀಲ್ದಾರ್ ಶ್ರೀಶೈಲ ತಳವಾರ್ ಘೋಷಿಸಿದರು.

ಸನ್ಮಾನ: ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದ ಫರೀದಾ ಬೇಗಂ ಮದಾರಿ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ರೇಣವ್ವ ಗಂಜಾಳರನ್ನು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಜಿಪಂ ಮಾಜಿ ಸದಸ್ಯ ಕೆರಿಬಸಪ್ಪ ನಿಡಗುಂದಿ, ಯೂಥ್ ಕಾಂಗ್ರೆಸ್‌ನ ತಾಲೂಕು ಅಧ್ಯಕ್ಷ ಮಹಾಂತೇಶ ಗಾಣಿಗೇರ್, ಗ್ರಾಪಂ ಮಾಜಿ ಅಧ್ಯಕ್ಷ ಮರ್ತುಜಾ ಖಾದರ್ ಸಾಬ್ ನದಾಫ್, ಪ್ರಮುಖರಾದ ಮಹಾದೇವಪ್ಪ ಗುರಿಕಾರ್, ದೇವೇಂದ್ರಗೌಡ ಗೌಡ್ರ, ಕಲ್ಲನಗೌಡ, ರಾಮಶೆಟ್ಟಿ, ಮುತ್ತಣ್ಣ ಅಂಗಡಿ, ಶರಣಪ್ಪ ಜಟ್ಟಿ, ರಾಜಾಸಾಬ್ ಅಮರಾವತಿ, ಪಿಡಿಒ ಶಿವರಾಜ ನಿಡಶೇಸಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net