ವಿಜಯಪುರದಲ್ಲಿ ಸರ್ಕಾರಿ ನೌಕರರಿಂದ ಸಂಕಲ್ಪಯಾತ್ರೆ

WhatsApp Image 2022-11-04 at 4.32.42 PM
ಹೊಸ ಪಿಂಚಣಿ ಯೋಜನೆ ಬದಲು ಹಳೆಯ ಪಿಂಚಣಿ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರು ಶುಕ್ರವಾರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಶಾಂತಾರಾಮ ತೇಜ, ನಾಗನಗೌಡ, ಸಂಗಣ್ಣ, ಮಲ್ಲನಗೌಡ ಹಡಲಗೇರಿ, ಶಂಕರ ಖಂಡೇಕರ, ಚಂದ್ರಶೇಖರ ನುಗ್ಗಲಿ ಮತ್ತಿತರರಿದ್ದರು.
Published on

ವಿಜಯಪುರ: ಹೊಸ ಪಿಂಚಣಿ ಯೋಜನೆ ಬದಲು ಹಳೆಯ ಪಿಂಚಣಿ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರು ಶುಕ್ರವಾರ ವಿಜಯಪುರ ನಗರದಲ್ಲಿ ಸಂಕಲ್ಪಯಾತ್ರೆ ನಡೆಸಿದರು.

ಈ ವೇಳೆ ಎನ್‌ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ ತೇಜ ಮಾತನಾಡಿ, 2006ರ ನಂತರ ನೇಮಕಗೊಂಡಿರುವ ರಾಜ್ಯದ ಎಲ್ಲ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ ಇದೊಂದು ಮರಣ ಶಾಸನವಾಗಿದೆ. ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಸತತ ಏರಿಕೆ, ಕೋವಿಡ್ ನಂತರ ರಾಷ್ಟ್ರಗಳಲ್ಲಿ ತೋರಿರುವ ಆರ್ಥಿಕ ಬಿಕ್ಕಟ್ಟು, ಜಾಗತಿಕ ಷೇರು ಮಾರುಕಟ್ಟೆ ಮೇಲೆ ನಕಾರಾತ್ಮಕ ಪರಿಣಾಮ ಬಿದ್ದಿದೆ. ಇದರಿಂದ ಭಾರತದ ಷೇರು ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ವಿವಿಧ ಕಂಪನಿಗಳು ಹಾಗೂ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಬಂಡವಾಳ ಹಿಂತೆಗೆಯುತ್ತಿದ್ದಾರೆ. ಈ ಬೆಳವಣಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿರುವ ನೌಕರರನ್ನು ಆತಂಕಕ್ಕೆ ತಳ್ಳಿದೆ. ಹೀಗಾಗಿ ರಾಜಸ್ತಾನ, ಛತ್ತಿಸಗಡ, ಜಾರ್ಖಂಡ, ಪಂಜಾಬ್ ಮಾದರಿಯಲ್ಲಿ ಎನ್.ಪಿ.ಎಸ್. ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ನಾಗನಗೌಡ ಮಾತನಾಡಿ, ರಾಜ್ಯದಲ್ಲಿ 2006ರಲ್ಲಿ ನೂತನ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಸಂಗಣ್ಣ ಮಾತನಾಡಿ, ವಾಸ್ತವದಲ್ಲಿ 12 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ನೌಕರರು ಮಾಸಿಕ ಪಿಂಚಣಿ 978 ರೂ. ದಿಂದ 2500 ರೂ. ವರೆಗೆ ಪಡೆಯುತ್ತಿದ್ದಾರೆ. ಹೀಗಾಗಿ ಎನ್.ಪಿ.ಎಸ್. ನೌಕರರು ಅಭದ್ರತೆಗೆ ಒಳಗಾಗಿದ್ದು, ರಾಜ್ಯದಲ್ಲಿ ಎನ್.ಪಿ.ಎಸ್. ಯೋಜನೆಯನ್ನು ರದ್ದು ಮಾಡಬೇಕೆಂದು ಆಗ್ರಹಿಸಿದರು.

ಮಲ್ಲನಗೌಡ ಹಡಲಗೇರಿ, ಶಂಕರ ಖಂಡೇಕರ, ಚಂದ್ರಶೇಖರ ನುಗ್ಗಲಿ, ಜಗದೀಶ ಬೋಳಸೂರ, ಬಿ.ಟಿ. ಗೌಡರ, ಹಣಮಂತ ಬೂದಿಹಾಳ, ತಿಪ್ಪಣ್ಣ ಜಂಬಗಿ, ಎ.ಬಿ. ನಾಯಕ, ಆನಂದ ಕೆಂಭಾವಿ, ಶಿವಕುಮಾರ ಕಲ್ಲೂರ, ಮಲ್ಲು ಮೇತ್ರಿ, ರವೀಂದ್ರ ಹೂಗಾರ, ಅಶೋಕ ಪತ್ತಾರ, ಮಹಾಂತಗೌಡ ಪಾಟೀಲ, ಗುರುರಾಜ ಕುಲಕರ್ಣಿ, ಚನ್ನಯ್ಯ ಮಠಪತಿ, ನಿಜು ಮೇಲಿನಕೇರಿ, ಈರಣ್ಣ ಹೊಸಟ್ಟಿ, ಸಂತೋಷ ಕುಲಕರ್ಣಿ, ನೀಲಾ ಇಂಗಳೆ, ಸಿದ್ದರಾಮ ಜಿಲ್ಲಿ, ಎಂ.ಎಸ್. ಭೂಸಗೊಂಡ, ಸುರೇಶ ಶೇಡಶ್ಯಾಳ, ಜುಬೇರ ಕೆರೂರ, ಆನಂದ ಭೂಸನೂರ, ಎಸ್.ವಿ. ಹರಳಯ್ಯ, ಎಂ.ಎಂ. ನೇದಲಗಿ, ಪಿ.ಎಸ್. ಚಾಂದಕವಟೆ, ಎಂ.ಎಂ. ವಾಲಿಕಾರ, ಎಸ್.ಡಿ. ಪಾಟೀಲ, ಆರ್.ಜಿ. ಬಂಡಿ, ಸಿ.ಎಸ್. ಹಕಾರಿ, ಉದಯ ಕೊಟ್ಯಾಳ, ಸವಿತಾ ಕಲ್ಯಾಣಪ್ಪಗೋಳ, ಸಂಗಮೇಶ ನವಲಿ, ಆನಂದ ಕಂಬಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net