ಸಂಕಲ್ಪ ಸಂಭ್ರಮ ಫೆ. 11ರಂದು

bannigidada
Published on

ಹುಬ್ಬಳ್ಳಿ: ಸಂಕಲ್ಪ ನೃತ್ಯ ಹಾಗೂ ಸಾಂಸ್ಕೃತಿಕ ಸಂಸ್ಥೆಯ ಮೂರನೇ ವರ್ಷದ ನಿಮಿತ್ತ ಇಲ್ಲಿಯ ಜೆ.ಸಿ. ನಗರ ನೌಕರರ ಭವನದಲ್ಲಿ ಫೆ. 11ರಂದು ಸಂಜೆ 5ಕ್ಕೆ ಸಂಕಲ್ಪ ಸಂಭ್ರಮ ಏರ್ಪಡಿಸಲಾಗಿದೆ ಎಂದು ಸಂಸ್ಥೆ ಮುಖ್ಯಸ್ಥೆ ಸಹನಾ ಬನ್ನಿಗಿಡದ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸ್ತ್ರೀಯ ನೃತ್ಯ ಗುರು ವನಿತಾ ಮಹಾಲೆ ಉದ್ಘಾಟಿಸುವರು. ಅತಿಥಿಗಳಾಗಿ ಜಗದೀಶ ಬೆಟಗೇರಿ, ಪ್ರಶಾಂತ ಭಟ್, ನಾಗೇಂದ್ರ ಬನ್ನಿಗಿಡದ ಪಾಲ್ಗೊಳ್ಳುವರು. ಜನಪದ ಕಲಾವಿದ ಪ್ರಕಾಶ ಮಲ್ಲಿಗವಾಡ ಅಧ್ಯಕ್ಷತೆ ವಹಿಸುವರು ಎಂದರು.
ವೇದಿಕೆ ಕಾರ್ಯಕ್ರಮದ ಬಳಿಕ ಸಂಕಲ್ಪ ನೃತ್ಯ ಶಾಲೆಯ ಮಕ್ಕಳಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನ ಜರುಗಲಿದೆ. ನಂತರ ಶಾಲೆಯ ವಿದ್ಯಾರ್ಥಿಗಳ ಪಾಲಕರಿಂದ ವಿಶೇಷ ನೃತ್ಯ ಪ್ರದರ್ಶನ ಜರುಗಲಿದೆ ಎಂದರು.
ಪ್ರಮುಖರಾದ ಪ್ರಕಾಶ ಮಲ್ಲಿಗವಾಡ, ಸಾಲಿಯಾನ ಸಂತೋಷ, ಪ್ರವೀಣ ಬಡಿಗೇರ, ನಾಗೇಂದ್ರ ಬನ್ನಿಗಿಡದ, ಮಮತಾ ಮಂಡಗಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net