ಹುಬ್ಬಳ್ಳಿ: ಇಲ್ಲಿಯ ಸಂಕಲ್ಪ ಸ್ಕೂಲ್ ಮಕ್ಕಳಿಗಾಗಿ ಹೊರಾಂಗಣ ಚಟುವಟಿಕೆ ಕಾರ್ಯಕ್ರಮವನ್ನು ನಡೆಸಲಾಯಿತು.
ನಗರದ ಶಿರೂರ ಪಾರ್ಕ್ ನಲ್ಲಿರುವ ಡೆಂಟಲ್ ಹೌಸ್‌ಗೆ ಭೇಟಿ ನೀಡಿದ ಮಕ್ಕಳು ಬಾಯಿಯ ಆರೋಗ್ಯದ ಕುರಿತು ಮಾಹಿತಿ ಪಡೆದರು.
ಡಾ. ಲಕ್ಷ್ಮಿ ಯಾವಗಲ್ ಅವರು ಬಾಯಿಯ ಆರೋಗ್ಯ ಹಾಗೂ ಸ್ವಚ್ಛತೆ ಕುರಿತು ಮಾಹಿತಿ ನೀಡಿದರು.
ಶಾಲೆಯ ಪ್ಲೇ ಗ್ರುಪ್, ನರ್ಸರಿ, ಎಲ್ ಕೆಜಿ, ಯುಕೆಜಿ ವಿಭಾಗದ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಶಾಲೆ ಪ್ರಾಚಾರ್ಯ ಪ್ರಾಚಿ ಲಾಳಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.