ಹುಬ್ಬಳ್ಳಿ: ಇಲ್ಲಿಯ ಸಂಕಲ್ಪ ನೃತ್ಯ ಹಾಗೂ ಸಾಂಸ್ಕೃತಿಕ ಸಂಸ್ಥೆಯ ವಾರ್ಷಿಕೋತ್ಸವ ಅಂಗವಾಗಿ ಫೆ. 7ರಂದು ಸಂಜೆ 4ಕ್ಕೆ ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಭರತನಾಟ್ಯ, ಜನಪದ, ಯಕ್ಷಗಾನ ನೃತ್ಯಗಳ ಸಮ್ಮಿಲನ ನಾಟ್ಯಧಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ನೃತ್ಯ ಗುರು ಸಹನಾ ಬನ್ನಿಗಿಡದ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ವತಿಯಿಂದ 16 ವರ್ಷಗಳಿಂದ ನೃತ್ಯ ತರಬೇತಿ ನೀಡುತ್ತಿದ್ದು, 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ ಎಂದರು.
ನಾಟ್ಯಧಾರ ಕಾರ್ಯಕ್ರಮವನ್ನು ವಿದುಷಿ ವನಿತಾ ಮಹಾಲೆ ಅವರು ಉದ್ಘಾಟಿಸುವರು. ಜನಪದ ನೃತ್ಯ ಗುರು ಡಾ. ಪ್ರಕಾಶ ಮಲ್ಲಿಗವಾಡ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ರಂಗಾಯಣ ನಿರ್ದೇಶಕ ರಾಜು ತಾಳಿಕೋಟೆ, ಡಾ. ರಾಮು ಮೂಲಗಿ, ಗುರುನಾಥ ಉಳ್ಳಿಕಾಶಿ, ಪ್ರಶಾಂತ ಭಟ್ ತಾಪಸಕರ ಪಾಲ್ಗೊಳ್ಳುವರು ಎಂದರು.
ಭಾಗ್ಯಶ್ರೀ ಗಾಳೆಮ್ಮನವರ, ಮಂಜುನಾಥ ಹೆಗಡೆ, ಸ್ಟಿನ್ ಎಲ್. ಅವರಿಗೆ ಗುರುವಂದನೆ ಹಾಗೂ ಗೌರವ ಸನ್ಮಾನ ನೀಡಲಾಗುವುದು. ನಂತರ ಭರತನಾಟ್ಯ, ಜನಪದ, ಯಕ್ಷಗಾನ ಮೂರು ಕಲೆಗಳ ಸಮ್ಮಿಲನ ಒಂದೇ ವೇದಿಕೆಯಲ್ಲಿ ನೋಡಬಹುದಾಗಿದೆ ಎಂದರು.
ನಾಗೇಂದ್ರ ಬನ್ನಿಗಿಡದ, ಪ್ರವಿಣ ಬಡಿಗೇರ ಗೋಷ್ಠಿಯಲ್ಲಿದ್ದರು.