ಬಡವರ ಪಾಲಿಗೆ ಸಂಜೀವಿನಿಯಾದ ಡಯಾಲಿಸಿಸ್ ಕೇಂದ್ರ

Sanjeevinia Dialysis Center for the poor
ರಬಕವಿ-ಬನಹಟ್ಟಿ ಸಮುದಾಯ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರವನ್ನು ಶಾಸಕ ಸಿದ್ದು ಸವದಿ ಉದ್ಘಾಟಿಸಿದರು. ಜಿಲ್ಲಾ ಸಮೀಕ್ಷಣಾಧಿಕಾರಿ ದಯಾನಂದ ಕರೆನ್ನವರ, ವೈದ್ಯಾಧಿಕಾರಿ ಡಾ. ಎನ್.ಎಂ. ನದಾಫ್, ಡಾ. ವೀರೇಶ ಹುಡೇದಮನಿ, ಡಾ. ಆರ್.ಎನ್. ನದಾಫ್ ಇತರರಿದ್ದರು.
Published on

ರಬಕವಿ-ಬನಹಟ್ಟಿ: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಯೋಜನೆ ಅಡಿಯಲ್ಲಿ ತಾಲೂಕು ಕೇಂದ್ರದ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರ ಆರಂಭಗೊಂಡಿರುವುದು ಮೂತ್ರಕೋಶ ತೊಂದರೆಯಿಂದ ಬಳಲುತ್ತಿರುವ ಬಡರೋಗಿಗಳ ಪಾಲಿಗೆ ಸಂಜೀವಿನಿಯಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಶುಕ್ರವಾರ ಅವರು ನಗರದ ಸಮುದಾಯ ಭವನದಲ್ಲಿ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿ ಮಾತನಾಡಿ, ರೋಗಿಗಳು ಡಯಾಲಿಸಿಸ್ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಸಮೀಕ್ಷಣಾಧಿಕಾರಿ ದಯಾನಂದ ಕರೆನ್ನವರ ಮಾತನಾಡಿ, ಡಯಾಲಿಸಿಸ್ ಕೇಂದ್ರವನ್ನು 30 ಲಕ್ಷ ರೂ. ಗಳ ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ನಿತ್ಯ ನಾಲ್ಕು ಜನರಿಗೆ ಡಯಾಲಿಸಿಸ್ ಮಾಡಲು ಅವಕಾಶವಿದೆ. ಘಟಕ ವ್ಯವಸ್ಥಾಪಕ, ತಾಂತ್ರಿಕ ಹಾಗೂ ಗ್ರೂಪ್ ‘ಡಿ’ ಮೂವರು ನೌಕರರಿಗೆ ತರಬೇತಿ ನೀಡಲಾಗಿದೆ ಎಂದರು.

ವೈದ್ಯಾಧಿಕಾರಿ ಡಾ. ಎನ್.ಎಂ. ನದಾಫ್, ಡಾ. ವೀರೇಶ ಹುಡೇದಮನಿ, ಡಾ. ಆರ್.ಎನ್. ನದಾಫ್, ಡಾ. ಸುನೀಲ ಹನಗಂಡಿ, ಪೌರಾಯುಕ್ತ ಜಗದೀಶ ಈಟಿ, ನಗರಸಭಾಧ್ಯಕ್ಷೆ ವಿದ್ಯಾ ದಭಾಡಿ, ಶ್ರೀಶೈಲ ಬೀಳಗಿ, ಶಿವಾನಂದ ಕಾಗಿ, ಮುಖೇಶ ಬನಹಟ್ಟಿ, ಸ್ಮಿತಾ ಕಾಳಗಿ, ಡಾ. ಆಯೀಷಾ ತಾಂಬೋಳಿ, ಡಾ. ಕಾವೇರಿ ಹಳ್ಯಾಳ, ಗಂಗಾಧರ ಗೊಬ್ಬಾಣಿ, ಅಪ್ಪಾಜಿ ಹೂಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net