

ಲೋಕಾಪುರ: ಲಕ್ಷಾನಟ್ಟಿ ಗ್ರಾಮದ ಮಾತೋಶ್ರೀ ಸಂಜೀವಿನಿ ಮಹಿಳಾ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟವು ಗ್ರಾಮದ ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಂಜೀವಿನಿಯಾಗಿದೆ ಎಂದು ಜಿ.ಪಂ. ಸಹಾಯಕ ನಿರ್ದೇಶಕ ಭೀಮಪ್ಪ ತಳವಾರ ಹೇಳಿದರು.
ಪಟ್ಟಣದ ಲೋಕೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜರುಗಿದ ಮಾತೋಶ್ರೀ ಸಂಜೀವಿನಿ ಮಹಿಳಾ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಕ್ಕೂಟದಲ್ಲಿರುವ ವಿವಿಧ ಗುಂಪುಗಳ ಸದಸ್ಯರು ರೊಟ್ಟಿ, ಉಪ್ಪಿನಕಾಯಿ, ಖಾರ, ಸಿಹಿ ಖಾದ್ಯ, ಫಿನಾಯಿಲ್ ತಯಾರಿಕೆ, ಹೈನುಗಾರಿಕೆ ಮುಂತಾದ ಸ್ವ ಉದ್ಯೋಗಗಳ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಇದು ಇತರರಿಗೆ ಪ್ರೇರಣೆಯಾಗಬೇಕು ಎಂದರು.
ವಲಯ ಮೇಲ್ವಿಚಾರಕ ರೇವಣಸಿದ್ದಯ್ಯ ಮರೇಗುದ್ದಿ ಮಾತನಾಡಿ, ಮಹಿಳೆಯರ ಕಷಿಯೇತರ ಚಟುವಟಿಕೆಗಳಲ್ಲಿ ತೊಡಗಲು ಸಾಲ ಸೌಲಭ್ಯ ನೀಡಲಾಗುತ್ತಿದೆ. ಸದಸ್ಯರಿಗೆ ಕೌಶಲ್ಯ ತರಬೇತಿಗಳ ಮೂಲಕ ಸ್ವಉದ್ಯೋಗಕ್ಕೆ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಒಕ್ಕೂಟದ ನಿಯಮ ನಿಬಂಧನೆ, ಕಷಿಯೇತರ ಚಟುವಟಿಕೆ, ಕಡಿಮೆ ವೆಚ್ಚದ ಜೀವ ವಿಮೆಗಳ ಬಗ್ಗೆ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಅಜಿತ್ ಮಾಹಿತಿ ನೀಡಿದರು.
ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ ಶಿವಕನ್ಯ ಕುಳ್ಳೋಳ್ಳಿ ಮಾತನಾಡಿ, ಮಾತೋಶ್ರೀ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಮಹಿಳಾ ಒಕ್ಕೂಟವು 2019ರಂದು ರಚನೆಯಾಯಿತು. ಇಂದು 58 ಸ್ವ ಸ್ವಸಹಾಯ ಸಂಘಗಳಲ್ಲ್ಲಿ 685 ಸದಸ್ಯರಿದ್ದಾರೆ. ಸರಕಾರದಿಂದ 44 ಸ್ವ ಸಹಾಯ ಸಂಘಗಳಿಗೆ ರೂ. 66 ಲಕ್ಷ ಕಷಿ ಹಾಗೂ ಕಷೀಯೇತರ ಜೀವನೋಪಾಯ ಆದಾಯ ತರುವ ಚಟುವಟಿಕೆ ಮಾಡಲು ಸಮುದಾಯ ಬಂಡವಾಳ ನಿಧಿಯಿಂದ ಕಡಿಮೆ ಸೇವಾ ಶುಲ್ಕದಲ್ಲಿ ಸಾಲ ನೀಡಲಾಗಿದೆ ಎಂದರು.
ಅಧ್ಯಕ್ಷರಾದ ಶಾಮಲಾ ಪಾಟೀಲ, ಭೀಮಾನಂದ ಶೆಟ್ಟರ್, ಹಣಮಂತ ಜೋಗಿನ, ಜಯಶ್ರೀ ಪಾಟೀಲ, ನೀಲಾ ಮಾಳಿ, ಲಕ್ಷ್ಮೀ ನಡುವಿನಮನಿ, ರೂಪಾ ಪತ್ತಾರ, ಚಂದ್ರವ್ವ ದೊಡಮನಿ, ರಂಗಪ್ಪ ಪಾಟೀಲ, ರೇಣುಕಾ ಮಾಳಿ, ಶಿವಕನ್ಯ ಕುಳ್ಳೊಳ್ಳಿ, ಮಹಾಲಕ್ಷ್ಮೀ ಪೂಜಾರ, ಶೋಭಾ ಸಾಲಾಪುರ, ಮಂಜುಳಾ ಸುರಪುರ, ಸಂಜೀವ ಬೆಳ್ಳುಂಡಗಿ, ಶ್ರೀಕಾಂತ ಹೊಳೆನ್ನವರ, ಶಶಿಕಲಾ ಎಂ. ಅಡಿವೇಶ ಧೂಪದ, ವಿಠ್ಠಲ ಮಾಂಗ ದೀಪಾ ಶಿರೋಳ, ಕಾಶಿಬಾಯಿ ಮೀಸಿ ಪವಿತ್ರ ಹಂದನ್ನವರ, ಮಂಜುನಾಥ ಹಾದಿಮನಿ, ಸುಜಾತಾ ಪಾಟೀಲ, ಸವಿತಾ ಯರಗಟ್ಟಿ ಇತರರಿದ್ದರು.