

ಕೊಂಡ್ಲಹಳ್ಳಿ: ಗ್ರಾಪಂ ವ್ಯಾಪ್ತಿಯ ಮಹಿಳಾ ಒಕ್ಕೂಟಗಳಲ್ಲಿನ ಸ್ವಸಹಾಯ ಗುಂಪಿನ ಮಹಿಳೆಯರು ಸ್ಥಳೀಯವಾಗಿ ಉತ್ಪಾದಿಸುವ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ಮಾಸಿಕ ಸಂತೆ ಯೋಜನೆ ಉತ್ತಮ ಮಾರುಕಟ್ಟೆಯಾಗಿದೆ ಎಂದು ಕೊಂಡ್ಲಹಳ್ಳಿ ಗ್ರಾಪಂ ಸಂಜೀವಿನಿ ಯೋಜನೆ ಅಧ್ಯಕ್ಷೆ ಟಿ.ಶೋಭಾ ಹೇಳಿದರು.
ಇಲ್ಲಿನ ಗ್ರಾಮೀಣ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಜಿಪಂ, ತಾಪಂನಿಂದ ಹಮ್ಮಿಕೊಂಡಿದ್ದ ಸಂಜೀವಿನಿ ಯೋಜನೆ ಮಾಸಿಕ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿ, ಲಾಭದಾಯಕ ಆದಾಯ ಒದಗಿಸುವ ಮೂಲಕ ಬಡತನದ ಬವಣೆ ಕಡಿಮೆಗೊಳಿಸಬೇಕು.
ಸಮುದಾಯದ ಸಂಸ್ಥೆಗಳಿಂದ ಸ್ವ ಉದ್ಯೋಗ ಅವಕಾಶ ಒದಗಿಸುವಿಕೆ ಗ್ರಾಮೀಣ ಜನರ ಜೀವನಮಟ್ಟದಲ್ಲಿ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ಸಂತೆಯಲ್ಲಿ ಸ್ಥಳೀಯವಾಗಿ ತಯಾರಿಸಿದ ಚಕ್ಕುಲಿ, ವಡೆ, ಶೇಂಗಾ ಚಿಕ್ಕಿ, ಜೋಳದ ರೊಟ್ಟಿ, ರೆಡಿಮೇಡ್ ಬಟ್ಟೆ, ಬ್ಯಾಗ್ ಇತರ ವಸ್ತುಗಳ ಮಾರಾಟ ಕಂಡು ಬಂತು.
ಯೋಜನೆಯ ತಾಲೂಕಾಧಿಕಾರಿ ವೆಂಕಟೇಶ್, ಗ್ರಾಪಂ ಘಟಕದ ಕಾರ್ಯದರ್ಶಿ ವಿಜಯಲಕ್ಷ್ಮಿ, ಜ್ಯೋತಿ, ರೋಜಾ,ನಿರ್ಮಲ, ಮಮತಾ, ಅರ್ಚನಾ, ಲಕ್ಷ್ಮಿ, ಲತಾ, ಅನುಸೂಯ ಇತರರಿದ್ದರು.