ವೈದ್ಯನ ಮೇಲೆ ಹಲ್ಲೆ ಆರೋಪ; ಸಂಜಯನಗರ ಪೊಲೀಸ್ ಇನ್ಸ್‌ಪೆಕ್ಟರ್ ಕಾತ್ಯಾಯಿನಿ ಅಮಾನತು

IMG-20210518-WA0031
Published on

ಬೆಂಗಳೂರು; ಸಂಜಯ್ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಕ್ರೈಂ ಸಿಬ್ಬಂದಿಯಿಂದ ವೈದ್ಯನ ಮೇಲೆ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಕಾತ್ಯಾಯಿನಿ ಮತ್ತು ಇಬ್ಬರು ಕ್ರೈಂ ಸಿಬ್ಬಂದಿಯನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಆದೇಶ ಹೊರಡಿಸಿದ್ದಾರೆ.

ಖಾಸಗಿ ವೈದ್ಯ ನಾಗರಾಜ್ ಮೇಲೆ ಹಲ್ಲೆ ಮಾಡಿ ಹಣ ಪಡೆದಿರೋ ಆರೋಪದ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಎಸಿಪಿ ರೀನಾ ಸುವರ್ಣ ರಿಗೆ ವರದಿ ನೀಡಲು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಆದೇಶಿಸಿದ್ದರು.

ವರದಿ ಬರೋವರೆಗೂ ಇನ್ ಸ್ಪೆಕ್ಟರ್ ಕ್ಯಾತಾಯಿನಿ ಸೇರಿ ಮೂವರನ್ನು ತಮ್ಮ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಡಿಸಿಪಿ ತಾಕೀತು ಮಾಡಿದ್ದರು. ಪ್ರಕರಣದ ಆಂತರಿಕ ತನಿಖೆ ನಡೆಸಿ ವರದಿಯನ್ನು ಡಿಸಿಪಿಗೆ ಎಸಿಪಿ ಸಲ್ಲಿಸಿದ್ದರು. ಇದೇ ತನಿಖಾ ವರದಿಯನ್ನು ನಗರ ಪೊಲೀಸ್ ಆಯುಕ್ತರಿಗೂ ಕಳುಹಿಸಿದ್ದ ಡಿಸಿಪಿ, ಪರಿಶೀಲನೆ‌ ನಡೆಸಿದ ಮೇಲ್ನೊಟಕ್ಕೆ ತಪ್ಪು ಸಾಬೀತಾಗಿದೆ. ಈ ಹಿನ್ನಲೆ ಇನ್ಸ್‌ಪೆಕ್ಟರ್ ಸೇರಿ ಮೂವರನ್ನು ಅಮಾನತು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net