ಸಂಜಯ ವರ್ಮ ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ

mrpl
Published on


ಮಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್)ನ ವ್ಯವಸ್ಥಾಪಕ ನಿರ್ದೇಶಕರಾಗಿ ಸಂಜಯ ವರ್ಮ ಅವರನ್ನು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ ನೇಮಕಗೊಳಿಸಿದೆ. 1993ರಲ್ಲಿ ಎಂಆರ್‌ಪಿಎಲ್‌ಗೆ ಸೇರ್ಪಡೆಯಾದ ಅವರು 2020ರಿಂದ ಎಂಆರ್‌ಪಿಎಲ್‌ನ ಮಂಡಳಿ ನಿರ್ದೇಶಕರಾಗಿದ್ದಾರೆ. ತೈಲ ಹಾಗೂ ಅನಿಲ ಕೈಗಾರಿಕೋದ್ಯಮದಲ್ಲಿ ಮೂರುವರೆ ದಶಕಗಳ ಅನುಭವ ಹೊಂದಿರುವ ಅವರು ಆಪರೇಶನ್ಸ್, ಪ್ರಾಜೆಕ್ಟ್, ಮೆಟೀರಿಯಲ್ಸ್ ಆ್ಯಂಡ್ ಹೆಲ್ತ್, ಸುರಕ್ಷಾ ಮತ್ತು ಪರಿಸರ ನಿರ್ವಹಣೆ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net