

ಅಥಣಿ: ಪಟ್ಟಣದ ಶತಮಾನೋತ್ಸವ ಸಂಭ್ರಮ ದಲ್ಲಿರುವ ಶ್ರೀ ಶಿವಯೋಗಿ ಮುರುಘೇಂದ್ರ ಅರ್ಬನ್ ಕೋ ಆ್ ಬ್ಯಾಂಕ್‌ನ ಆಡಳಿತ ಮಂಡಳಿಯ ಚುನಾವಣೆ 38 ವರ್ಷಗಳ ಬಳಿಕ ಭಾನುವಾರ ಜರುಗಿತು.
ನಿಕಟಪೂರ್ವ ಅಧ್ಯಕ್ಷ ಸಂಜಯ ತೆಲಸಂಗ ಅವರ ೆನೆಲ್‌ನ ಎಲ್ಲ 13 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಶಿವಯೋಗಿ ಗೆಜ್ಜಿ, ನಿವೇದಿತಾ ತೆಲಸಂಗ, ಸಂಜಯ ತೆಲಸಂಗ, ಶ್ರೀಶೈಲ ಮೊಪಗಾರ, ಶಿವಯೋಗಿ ಮಂಗಸೂಳಿ, ಸಂತೋಷ ಸಾವಡಕರ, ರುದ್ರಯ್ಯ ಹಿರೇಮಠ ಹಾಗೂ ಮಹಿಳಾ ಕ್ಷೇತ್ರದಿಂದ ವಿಜಯಮಾಲಾ ತೆಲಸಂಗ, ಸುಷ್ಮಾ ಇಟ್ನಾಳಮಠ, ಹಿಂದುಳಿದ ಅ-ವರ್ಗದಿಂದ ಶಿವಾನಂದ ಹುನ್ನೂರ, ಪರಿಶಿಷ್ಟ ಜಾತಿಯಿಂದ ರಾಮು ಗಾಡಿವಡ್ಡರ, ಪರಿಶಿಷ್ಟ ಪಂಗಡದಿಂದ ದುಂಡಪ್ಪ ಬುರುಡ,ಹಿಂದುಳಿದ ಬ-ವರ್ಗದಿಂದ ಮಹೇಶ ಚುನಮುರಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಡಾ.ಮಲ್ಲಪ್ಪ ರಾಹುತನ್ನವರ ಘೋಷಣೆ ಮಾಡಿದರು. ಸಹಾಯಕ ಚುನಾವಣಾಧಿಕಾರಿಗಳಾಗಿ ಆಶಾ ಬಿರಾದಾರ, ಶಂಕರ ಬಸವಣ್ಣವರ, ಡಾ.ರಾಜೇಂದ್ರ ಒಡೆಯರ ಕಾರ್ಯನಿರ್ವಹಿಸಿದರು.
ಗೆಲುವು ಸಾಧಿಸಿದ ಅಭ್ಯರ್ಥಿಗಳು ಗಚ್ಚಿನಮಠಕ್ಕೆ ಆಗಮಿಸಿ ಮುರುಘೇಂದ್ರ ಶಿವಯೋಗಿಗಳ ಕರ್ತು ಗದ್ದುಗೆ ದರ್ಶನ ಪಡೆದು, ಶಿವಬಸವ ಸ್ವಾಮೀಜಿ ಅವರಿಂದ ಆರ್ಶಿವಾದ ಪಡೆದರು. ಬ್ಯಾಂಕ್‌ನ ನೂತನ ಅಭ್ಯರ್ಥಿಗಳ ಬೆಂಬಲಿಗರು ಗುಲಾಲ ಎರಚಿ, ಸಿಹಿ ಹಂಚಿ,ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.