

ಬೋರಗಾಂವ: ದೆಹಲಿಯ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ, ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಹಾಗೂ ರಾಜ್ಯ ಸರ್ಕಾರದಿಂದ ಅನುಮತಿ ದೊರೆತಿದ್ದು, 2024-25ನೇ ಸಾಲಿನಿಂದ ವಿದ್ಯಾಸಾಗರ ಶಿಕ್ಷಣ ಸಂಸ್ಥೆಯಿಂದ ಸಂಜಯ ಕಾಲೇಜ್ ಆಫ್ ಫಾರ್ಮಸಿ ಆರಂಭಿಸಲಾಗುವುದು ಎಂದು ಸಂಸ್ಥೆ ನಿರ್ದೇಶಕ ಮಲಗೌಡ ಮೈಸಾಳೆ ತಿಳಿಸಿದರು.
ಪಟ್ಟಣದ ಸಂಸ್ಥೆ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಸದುದ್ದೇಶದಿಂದ ಅಣ್ಣಾಸಾಹೇಬ ಹಾವಲೆ ಇದೀಗ ಡಿ ಫಾರ್ಮಸಿ ಮತ್ತು ಬಿ ಫಾರ್ಮಸಿ ಕಾಲೇಜು ಮಂಜೂರು ಮಾಡಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ. ಎರಡೂ ವಿಭಾಗಗಳಲ್ಲಿ 60 ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಪ್ರವೇಶ ಸಿಕ್ಕಿದೆ ಎಂದು ಮಾಹಿತಿ ನೀಡಿದರು.
ಅಲ್ಲದೆ, ಬಿಇಡಿ, ಡಿಇಡಿ, ಐಟಿಐ ಹಾಗೂ ಅಗ್ನಿ ಸುರಕ್ಷತಾ ಕೋರ್ಸ್‌ಗಳನ್ನು ತೆರೆದಿದ್ದಾರೆ ಎಂದು ತಿಳಿಸಿದರು.
ಅನೂಜ ಹಾವಲೆ, ವಿದ್ಯಾಧರ ಅಮ್ಮಣ್ಣವರ, ಬಾಬಾಸಾಹೇಬ ಪಾಟೀಲ, ರಾವಸಾಹೇಬ ತೆರದಾಳೆ, ಸುಕುಮಾರ ಚಿಪ್ರೆ, ಅಶೋಕ ಪಾಟೀಲ, ಬಾಳಾಸಾಹೇಬ ಕಾಮತೆ, ಶಿವಪ್ಪ ಮಾಳಗೆ, ಸಂಜಯ ಹಾವಲೆ ಇತರರಿದ್ದರು.