ಸಂಜಯ್ ಕೆ.ಆರ್.ಪೇಟೆ ಪಿಎಸಿಎಸ್ ಅಧ್ಯಕ್ಷ

18ald-1
Published on

ಆಲ್ದೂರು: ಕೆ.ಆರ್.ಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಸಂಜಯ್ ತಿರುಗುಣ ಹಾಗೂ ಉಪಾಧ್ಯಕ್ಷರಾಗಿ ಈರಯ್ಯ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು. ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಂಜಯ್ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಈರಯ್ಯ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಖಾರಿಯಾಗಿದ್ದ ಸಹಕಾರ ಇಲಾಖೆ ಅಧೀಕ್ಷಕ ಕೆ.ವಿ.ಕಲ್ಲೇಶಪ್ಪ ಅವಿರೋಧ ಆಯ್ಕೆ ಘೋಷಿಸಿದರು. ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಆಲ್ದೂರು ಮಂಡಲ ಅಧ್ಯಕ್ಷ ರವಿ ಬಸರವಳ್ಳಿ, ಪ್ರಾಧಾನ ಕಾರ್ಯದರ್ಶಿ ಅರವಿಂದ್ ಕೂದುವಳ್ಳಿ , ಮಾಜಿ ಸೈನಿಕ ರಾಘವೇಂದ್ರ, ಕಾರ್ಯಕರ್ತ ಸುಪ್ರಿತ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net