ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ಸಂಜಯ್ ದತ್

27
Published on

ಮೈಸೂರು ಸೇರಿದಂತೆ ಸುತ್ತ ಮುತ್ತಲಿನ ಸ್ಥಳಗಳಲ್ಲಿ ಚಿತ್ರೀಕರಣದಲ್ಲಿ ನಿರತರಾಗಿರುವ ಕನ್ನಡದ ಡಿಕೆ ಚಿತ್ರ ತಂಡವು ಸೋಮವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡಿ ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ತಾಯಿ ದರ್ಶನ ಪಡೆಯಿತು.

ಡಿಕೆ ಚಿತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ನಟ ಸಂಜಯ್ ದತ್, ಚಿತ್ರದ ನಿರ್ದೇಶಕ ಪ್ರೇಮ್ ಹಾಗೂ ನಟ ಶೋಭಾರಾಜ್ ಸೇರಿದಂತೆ ಇತರರು ದರ್ಶನ ಪಡೆದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ದತ್, ಹಲವು ಬಾರಿ ಮೈಸೂರಿಗೆ ಬಂದಿದ್ದರೂ ತಾಯಿಯ ಆಶೀರ್ವಾದ ಪಡೆಯಲು ಸಾಧ್ಯವಾಗಿರಲಿಲ್ಲ. ಇಂದು ಚಾಮುಂಡಿ ತಾಯಿಯ ದರ್ಶನ ಮಾಡಿ ಆಶೀರ್ವಾದ ಪಡೆದುಕೊಂಡೆ ಎಂದರು.

ದಕ್ಷಿಣ ಭಾರತದ ಸಿನಿಮಾ ಅಂದರೆ ನನಗೆ ಬಹಳ ಇಷ್ಟು. ಯಶ್ ಅವರ ಜೊತೆ ಕೆಜಿಎಫ್‌ನಲ್ಲಿ ನಟಿಸಿದ್ದೇನೆ. ನಂತರ ಕೆಡಿ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಐ ಲವ್ ಯೂ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net