

ಶನಿವಾರಸಂತೆ: ಸಮೀಪದ ಬೆಂಬಳೂರು ಗ್ರಾಮದಲ್ಲಿ ಗುರುವಾರ ಶ್ರೀ ತಾಯಿ ಬಾಣಂತಮ್ಮ ಮತ್ತು ಶ್ರೀ ಕುಂಟ ಕುಮಾರ ಲಿಂಗೇಶ್ವರಸ್ವಾಮಿ ಜಾತ್ರೋತ್ಸವ ಜರುಗಿತು.
ಗ್ರಾಮದಲ್ಲಿರುವ ತಾಯಿ ಶ್ರೀ ಬಾಣಂತಮ್ಮ ದೇವಾಲಯದಲ್ಲಿ ಶ್ರೀ ಬಾಣಂತಮ್ಮ ಮತ್ತು ಪುತ್ರ ಕುಂಟ ಕುಮಾರಲಿಂಗೇಶ್ವರಸ್ವಾಮಿ ದೇವರ ವಿಗ್ರಹಗಳನ್ನು ಅಡ್ಡಪಲ್ಲಕ್ಕಿಯಲ್ಲಿರಿಸಿ ವಾದ್ಯಗೋಷ್ಠಿ ಸಮೇತ ಮೆರವಣಿಗೆ ಮಾಡಲಾಯಿತು. ಬಳಿಕ ಜಾತ್ರಾ ಮೈದಾನದಲ್ಲಿರುವ ಚಿಕ್ಕ ಗುಡಿಯೊಳಗೆ ಮೂರ್ತಿಗಳನ್ನು ಇರಿಸಿ ಪೂಜೆ ಸಲ್ಲಿಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಪ್ರತಿವರ್ಷ ಸಂಕ್ರಾಂತಿ ಹಬ್ಬದ ಮರುದಿನ ಜಾತ್ರೋತ್ಸವ ನಡೆಸಿಕೊಂಡು ಬರಲಾಗುತ್ತಿದೆ.